ನವದೆಹಲಿ: ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ದೇಶದ 14ನೇ ಅಟಾರ್ನಿ ಜನರಲ್ (ಎ.ಜಿ) ಆಗಿ ನೇಮಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ರೋಹಟಗಿ ಅವರಿಗೆ ಇದು ಎರಡನೇ ಅವಧಿಯಾಗಿದ್ದು, ಇದಕ್ಕೂ ಮೊದಲು2014ರ ಜೂನ್‌ನಿಂದ 2017ರ ಜೂನ್ ವರೆಗೆ ಸೇವೆ ಸಲ್ಲಿಸಿದ್ದರು.
ಬಳಿಕ ಆ ಸ್ಥಾನಕ್ಕೆಕೆ.ಕೆ. ವೇಣುಗೋಪಾಲ್ ನೇಮಕಗೊಂಡಿದ್ದರು. 91 ವರ್ಷದ ವೇಣುಗೋಪಾಲ್ ಅವರ ಕರ್ತವ್ಯದ ಅವಧಿ ಸೆಪ್ಟೆಂಬರ್ 30ಕ್ಕೆ ಮುಕ್ತಾಯವಾಗಲಿದೆ. ರೋಹಟಗಿ ಅಕ್ಟೋಬರ್ 1 ರಿಂದ ಸೇವೆ ಆರಂಭಿಸಲಿದ್ದಾರೆ.
ರೋಹಟಗಿ ಅವರು ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶಿಶ್ ಮಿಶ್ರಾ ಮತ್ತು ಐಷಾರಾಮಿ ಹಡಗಿನ ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪರವಕಾಲತ್ತು ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.