ADVERTISEMENT

ದೇಶದ ನೂತನ ಅಟಾರ್ನಿ ಜನರಲ್‌ ಆಗಿ ಹಿರಿಯ ವಕೀಲ ಆರ್‌.ವೆಂಕಟರಮಣಿ ನೇಮಕ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 16:43 IST
Last Updated 28 ಸೆಪ್ಟೆಂಬರ್ 2022, 16:43 IST
   

ನವದೆಹಲಿ: ದೇಶದ ನೂತನ ಅಟಾರ್ನಿ ಜನರಲ್‌ (ಎ.ಜಿ) ಆಗಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಆರ್‌. ವೆಂಕಟರಮಣಿ ಅವರನ್ನು ಕೇಂದ್ರ ಸರ್ಕಾರ ಬುಧವಾರ ನೇಮಕ ಮಾಡಿದೆ. ಅವರ ಅಧಿಕಾರ ಅವಧಿಮೂರು ವರ್ಷ ಇರಲಿದೆ.

ಸದ್ಯ ಎ.ಜಿ ಆಗಿರುವ ಕೆ.ಕೆ. ವೇಣುಗೋಪಾಲ್‌ (91) ಅವರ ಅಧಿಕಾರಾವಧಿ ಇದೇ 30ರಂದು ಮುಕ್ತಾಯವಾಗಲಿದೆ. ಹೀಗಾಗಿ ಆರ್‌. ವೆಂಕಟರಮಣಿ ಅವರನ್ನು ನೇಮಕ ಮಾಡಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

1950ರ ಏಪ್ರಿಲ್‌ 13ರಂದು ಪುದುಚೇರಿಯಲ್ಲಿ ಜನಿಸಿದ ಇವರು, 1977ರಲ್ಲಿ ತಮಿಳುನಾಡಿನಿಂದ ವಕೀಲ ವೃತ್ತಿ ಆರಂಭಿಸಿದರು. 2014ರಿಂದ 2017ರವರೆಗೆ ಎ.ಜಿ ಆಗಿದ್ದ ಮುಕುಲ್‌ ರೋಹಟಗಿ ಅವರನ್ನು ಮತ್ತೊಂದು ಅವಧಿಗೆ ನೇಮಿಸಲಾಗುತ್ತದೆ ಎನ್ನಲಾಗಿತ್ತು. ಆದರೆ, ಕೇಂದ್ರದ ಈ ಪ್ರಸ್ತಾವವನ್ನುರೋಹಟಗಿ ತಿರಸ್ಕರಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.