ADVERTISEMENT

ಒಡಿಶಾ: ಸ್ಪೀಕರ್ ಆಗಿ ಸುರ‍್ಮಾ ಪಾಧಿ ಅವಿರೋಧ ಆಯ್ಕೆ

ಪಿಟಿಐ
Published 20 ಜೂನ್ 2024, 8:12 IST
Last Updated 20 ಜೂನ್ 2024, 8:12 IST
<div class="paragraphs"><p>ಒಡಿಶಾ ವಿಧಾನಸಭೆಯ ಸ್ಪೀಕರ್ ಆಗಿ ಸುರಮಾ ಪಾಢಿ ಅವಿರೋಧ ಆಯ್ಕೆಯಾದರು.</p></div>

ಒಡಿಶಾ ವಿಧಾನಸಭೆಯ ಸ್ಪೀಕರ್ ಆಗಿ ಸುರಮಾ ಪಾಢಿ ಅವಿರೋಧ ಆಯ್ಕೆಯಾದರು.

   

ಭುವನೇಶ್ವರ: ಬಿಜೆಪಿ ಹಿರಿಯ ನಾಯಕಿ ಸುರ‍್ಮಾ ಪಾಧಿ ಅವರು ಒಡಿಶಾ ವಿಧಾನಸಭೆಯ ಸ್ಪೀಕರ್ ಆಗಿ ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ADVERTISEMENT

ನಯಾಗಢ ಜಿಲ್ಲೆಯ ರಾಣಾಪುರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ಪಾಧಿ ಅವರೊಬ್ಬರೇ ಸ್ಪೀಕರ್ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು.

ಹಂಗಾಮಿ ಸ್ಪೀಕರ್ ಆಗಿದ್ದ ಆರ್.ಪಿ. ಸ್ವೈನ್ ಅವರು ಅವಿರೋಧ ಆಯ್ಕೆ ಘೋಷಿಸಿದ ನಂತರ, ಸುರ‍್ಮಾ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಸುರ‍್ಮಾ ಪಾಧಿ ಒಡಿಶಾ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾದ ಎರಡನೇ ಮಹಿಳೆ. ಇವರಿಗೂ ಮುನ್ನ ಬಿಜೆಡಿಯ ಪರಿಮಳಾ ಮಲ್ಲಿಕ್‌ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದರು.

ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, ಉಪಮುಖ್ಯಮಂತ್ರಿಗಳಾದ ಕೆ.ವಿ. ಸಿಂಗ್ ದೇವ್, ಪ್ರವತಿ ಪರಿದಾ, ವಿರೋಧ ಪಕ್ಷದ ನಾಯಕ ನವೀನ್ ಪಟ್ನಾಯಕ್ ಮತ್ತಿತರರು ನೂತನ ಸ್ಪೀಕರ್‌ ಅವರನ್ನು ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.