ADVERTISEMENT

ಜಮ್ಮುವಿಗೆ ಪ್ರತ್ಯೇಕ ರೈಲ್ವೆ ವಿಭಾಗ: ಕೇಂದ್ರ ಸಚಿವ ಜಿತೇಂದ್ರ ಸಿಂಗ್

ಜಮ್ಮುವಿಗೆ ಪ್ರತ್ಯೇಕ ರೈಲ್ವೆ ವಿಭಾಗವನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಹೇಳಿದ್ದಾರೆ.

ಪಿಟಿಐ
Published 15 ನವೆಂಬರ್ 2024, 2:46 IST
Last Updated 15 ನವೆಂಬರ್ 2024, 2:46 IST
<div class="paragraphs"><p>ಜಮ್ಮುವಿನ ಚೀನಾಬ್ ರೈಲ್ವೆ ಸೇತುವೆ</p></div>

ಜಮ್ಮುವಿನ ಚೀನಾಬ್ ರೈಲ್ವೆ ಸೇತುವೆ

   

ನವದೆಹಲಿ: ಜಮ್ಮುವಿಗೆ ಪ್ರತ್ಯೇಕ ರೈಲ್ವೆ ವಿಭಾಗವನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿನ ರೈಲ್ವೆ ಅಭಿವೃದ್ಧಿ ಕೆಲಸಗಳನ್ನು ಹೆಚ್ಚು ಆಸಕ್ತಿವಹಿಸಿ ಗಮನಿಸುತ್ತಿದ್ದಾರೆ. ಇತ್ತೀಚೆಗೆ ಜಮ್ಮುವಿನ ಕೈಗಾರಿಕೋದ್ಯಮಿಗಳು ಜಮ್ಮುವಿಗೆ ಪ್ರತ್ಯೇಕ ರೈಲ್ವೆ ವಿಭಾಗ ಬೇಕು ಎಂದು ಪ್ರಧಾನಿ ಅವರನ್ನು ಭೇಟಿಯಾಗಿದ್ದರು ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ತಿಳಿಸಿದ್ದಾರೆ.

ADVERTISEMENT

ಜಮ್ಮುವಿಗೆ ಪ್ರತ್ಯೇಕ ರೈಲ್ವೆ ವಿಭಾಗ ಸ್ಥಾಪನೆ ಬಗ್ಗೆ ರೈಲ್ವೆ ಸಚಿವರೂ ಆಸಕ್ತಿ ವಹಿಸಿದ್ದು ಶೀಘ್ರದಲ್ಲೇ ಘೋಷಣೆಯಾಗಲಿದೆ ಎಂದು ಭರವಸೆ ನೀಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ರೈಲ್ವೆ ಅಭಿವೃದ್ಧಿಯು ಅಲ್ಲಿ ಉದ್ಯೋಗವಕಾಶಗಳ ಬೆಳವಣಿಗೆ ಹಾಗೂ ಕೈಗಾರಿಕಾಭಿವೃದ್ಧಿಗೆ ಸಹಾಯವಾಗಲಿದೆ ಎಂದು ಸಿಂಗ್ ಹೇಳಿದ್ದಾರೆ.

ದೆಹಲಿಯಲ್ಲಿರುವ ಉತ್ತರ ರೈಲ್ವೆ ವಲಯದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿನ ರೈಲ್ವೆ ಚಟುವಟಿಕೆಗಳನ್ನು ನೋಡಿಕೊಳ್ಳಲಾಗುತ್ತದೆ. ಸದ್ಯ ಪಂಜಾಬ್‌ನ ಫಿರೋಜ್‌ಪುರ್‌ ರೈಲ್ವೆ ವಿಭಾಗದಿಂದ ಜಮ್ಮು ಮತ್ತು ಕಾಶ್ಮೀರ ರೈಲ್ವೆ ಚಟುವಟಿಕೆಗಳು ನಿರ್ವಹಣೆ ಆಗುತ್ತಿವೆ.

ಜಿತೇಂದ್ರ ಸಿಂಗ್ ಅವರು ಜಮ್ಮುವಿನ ಉದಂಪುರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.