ನವದೆಹಲಿ: ‘ಲಸಿಕೆ ಲಭ್ಯತೆ ಅರಿವಿಲ್ಲದೇ ಎಲ್ಲ ವರ್ಷದವರಿಗೆ ಕೇಂದ್ರ ಸರ್ಕಾರ ಲಸಿಕೆ ಅಭಿಯಾನ ಆರಂಭಿಸಿತು’ ಎಂಬ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಹೇಳಿಕೆಯಿಂದ ಅಂತರ ಕಾಯ್ದುಕೊಳ್ಳಲು ಸೀರಂ ಇನ್‌ಸ್ಟಿಟ್ಯೂಟ್ ನಿರ್ಧರಿಸಿದೆ.
‘ಈ ಹೇಳಿಕೆಯು ಕಂಪನಿಯ ನಿಲುವಲ್ಲ’ ಎಂದೂ ಸ್ಪಷ್ಟಪಡಿಸಿದೆ. ಈ ಕುರಿತು ಮೇ 22ರಂದು ಕೇಂದ್ರ ಆರೋಗ್ಯ ಸಚಿವಾಲಯದ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರಿಗೆ ಪತ್ರ ಬರೆದು ಸ್ಪಷ್ಟನೆ ನೀಡಿದೆ.
‘ಕಂಪನಿಯ ಸಿಇಒ ಆದಾರ್ ಪೂನಾವಾಲಾ ಪರವಾಗಿ ಸ್ಪಷ್ಟನೆ ನೀಡುತ್ತಿದೆ. ಅದು ಕಂಪನಿಯು ನೀಡಿದ ಹೇಳಿಕೆಯಲ್ಲ. ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. ಪೂನಾವಾಲಾ ಅವರಷ್ಟೇ ಕಂಪನಿಯ ಅಧಿಕೃತ ವಕ್ತಾರರು’ ಎಂದು ತಿಳಿಸಿದೆ.
ಸೀರಂ ಇನ್‌ಸ್ಟಿಟ್ಯೂಟ್ ಸದ್ಯ ಕೋವಿಶೀಲ್ಡ್ ಲಸಿಕೆಯ ಉತ್ಪಾದನೆ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಕೋವಿಡ್ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆಗೆ ಕೈಜೋಡಿಸಲಿದೆ ಎಂದು ಈ ಹೇಳಿಕೆಯು ಭರವಸೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.