ನವದೆಹಲಿ:ರೈಲು ಟಿಕೆಟ್ ಆನ್‌ಲೈನ್ ಬುಕಿಂಗ್‌ಗೆ ಸೇವಾ ಶುಲ್ಕವೂ ಸೇರಿದಂತೆ ಇತರ ಸೇವಾ ಶುಲ್ಕಗಳು, ದಂಡ, ತೆರಿಗೆ ಕಡಿತ ಮುಂತಾದಜನ ಜೀವನದ ಮೇಲೆ ಪರಿಣಾಮ ಬೀರುವಂತಹ ಪ್ರಮುಖ ನಿರ್ಧಾರಗಳು ಭಾನುವಾರದಿಂದ (ಸೆಪ್ಟೆಂಬರ್ 1)ಜಾರಿಗೆ ಬರಲಿವೆ.
ಹೊಸ ನಿಯಮದ ಪ್ರಕಾರ,ನಾನ್ ಎಸಿ ಕೋಚ್‌ನ ಪ್ರತಿ ಸೀಟ್ ಆನ್‌ಲೈನ್ ಮೂಲಕ ಕಾಯ್ದಿರಿಸಲು₹ 15 ಸೇವಾ ಶುಲ್ಕ ಭರಿಸಬೇಕಾಗುತ್ತದೆ. ಹಾಗೆಯೇ, ಎಸಿ ಕೋಚ್‌ನ ಪ್ರತಿ ಸಿಟುಕಾಯ್ದಿರಿಸುವಿಕೆಗೆ₹ 30 ಶುಲ್ಕ ಭರಿಸಬೇಕಾಗಲಿದೆ.
ಇದನ್ನೂ ಓದಿ:ಸೆಪ್ಟೆಂಬರ್ 1ರಿಂದ ಸಂಚಾರ ನಿಯಮ ಕಠಿಣ
ಇತರ ನಿರ್ಧಾರಗಳು
*ಶೇ 2ರಷ್ಟು ಟಿಡಿಎಸ್ – ಬ್ಯಾಂಕ್ ಖಾತೆಯಿಂದ ₹ 1 ಕೋಟಿಗಿಂತ ಅಧಿಕ ನಗದು ಪಡೆದರೆ
* 5% ಟಿಡಿಎಸ್ – ಮದುವೆ ಮತ್ತಿತರ ಸಮಾರಂಭಗಳಲ್ಲಿ ಗುತ್ತಿಗೆದಾರರು ಅಥವಾ ವೃತ್ತಿಪರರಿಗೆ ವಾರ್ಷಿಕ ಪಾವತಿ ಮೊತ್ತ ₹ 50 ಲಕ್ಷ ಮೀರಿದರೆ
* ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಆಯ್ದ ನಿಯಮಗಳ ಉಲ್ಲಂಘನೆಗೆ ದುಬಾರಿ ದಂಡ
* ಎಸ್‌ಬಿಐನ ರೆಪೊ ದರ ಆಧರಿಸಿದ ಗೃಹ, ವಾಹನ ಸಾಲದ ಬಡ್ಡಿದರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.