ADVERTISEMENT

ಕಾನೂನು ಉಲ್ಲಂಘಿಸುವ ಲೈಂಗಿಕ ಕಾರ್ಯಕರ್ತರಿಗೆ ವಿಶೇಷ ವಿನಾಯಿತಿ ಇಲ್ಲ: ಹೈಕೋರ್ಟ್

ಪಿಟಿಐ
Published 8 ಆಗಸ್ಟ್ 2022, 14:27 IST
Last Updated 8 ಆಗಸ್ಟ್ 2022, 14:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ‘ಕಾನೂನು ಉಲ್ಲಂಘಿಸುವ ಲೈಂಗಿಕ ಕಾರ್ಯಕರ್ತೆಯರಿಗೆ ವಿಶೇಷ ವಿನಾಯಿತಿ ನೀಡಲಾಗದು. ಸಾಮಾನ್ಯ ನಾಗರಿಕರಂತೆ ಅವರು ಕೂಡ ಶಿಕ್ಷೆ ಅನುಭವಿಸಲೇಬೇಕು’ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ವೇಶ್ಯಾವಾಟಿಕೆಗೆ ತಳ್ಳಿದ ಆರೋಪದ ಮೇಲೆ ಬಂಧಿಯಾಗಿರುವ ಲೈಂಗಿಕ ಕಾರ್ಯಕರ್ತೆಯೊಬ್ಬರು ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆಶಾ ಮೆನನ್‌ ವಜಾಗೊಳಿಸಿದರು.

‘ಅರ್ಜಿದಾರರ ಮೇಲೆ ಗಂಭೀರ ಆರೋಪಗಳಿವೆ. ಐಪಿಸಿ ಸೆಕ್ಷನ್‌ 370 ಹಾಗೂ 372ರ ಅಡಿ ಪ್ರಕರಣ ದಾಖಲಾಗಿದೆ. ಸಾಮಾನ್ಯ ನಾಗರಿಕರಂತೆ ಸಂವಿಧಾನದ ಅಡಿ ನೀಡಲಾಗಿರುವ ಎಲ್ಲಾ ಹಕ್ಕುಗಳನ್ನು ಪಡೆಯುವ ಅವಕಾಶ ಲೈಂಗಿಕ ಕಾರ್ಯಕರ್ತೆಯರಿಗೂ ಇದೆ. ಅದನ್ನು ಒಪ್ಪುತ್ತೇನೆ. ಒಂದು ವೇಳೆ ಅವರು ಕಾನೂನು ಉಲ್ಲಂಘಿಸಿದ್ದೇ ಆದರೆ ಇತರರ ಹಾಗೆ ಶಿಕ್ಷೆ ಅನುಭವಿಸಲೇಬೇಕಾಗುತ್ತದೆ. ಈ ವಿಚಾರದಲ್ಲಿ ಅವರಿಗೆ ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ’ ಎಂದು ಆಗಸ್ಟ್‌ 2ರಂದು ನೀಡಿರುವ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ ಆರೋಪದಲ್ಲಿ ಲೈಂಗಿಕ ಕಾರ್ಯಕರ್ತೆಯನ್ನು ಹೋದ ವರ್ಷದ ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು. ತನ್ನ ತಾಯಿಗೆ ಮಂಡಿಯ ಶಸ್ತ್ರಚಿಕಿತ್ಸೆ ಮಾಡಿಸಬೇಕಿರುವುದರಿಂದ ಕನಿಷ್ಠ ಒಂದು ವಾರದ ಮಟ್ಟಿಗೆ ಮಧ್ಯಂತರ ಜಾಮೀನು ನೀಡಬೇಕೆಂದು ಕೋರಿ ಅವರು ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.