ADVERTISEMENT

ಎಸ್‌ಇಜೆಡ್‌: ಹೂಡಿಕೆಗೆ ಟ್ರಸ್ಟ್‌ಗಳಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 18:54 IST
Last Updated 27 ಜೂನ್ 2019, 18:54 IST

ನವದೆಹಲಿ: ವಿಶೇಷ ಆರ್ಥಿಕ ವಲಯದಲ್ಲಿ (ಎಸ್‌ಇಜೆಡ್‌) ತಮ್ಮ ಘಟಕ ಸ್ಥಾಪಿಸಲು ಟ್ರಸ್ಟ್‌ಗಳಿಗೆ ಅವಕಾಶ ಕಲ್ಪಿಸುವ ವಿಶೇಷ ಆರ್ಥಿಕ ವಲಯ (ತಿದ್ದುಪಡಿ) ಮಸೂದೆಗೆ ಸಂಸತ್ತು ಗುರುವಾರ ಅನುಮೋದನೆ ನೀಡಿತು. ಈ ವಿಚಾರಕ್ಕೆ ಸಂಬಂಧಿಸಿ ಲೋಕಸಭೆ ಚುನಾವಣೆಗೆ ಮೊದಲೇ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು.

ಕಾಯ್ದೆಯ ತಿದ್ದುಪಡಿಯೊಂದಿಗೆ ಸರ್ಕಾರ ವಾರ್ಷಿಕ ಸುಮಾರು ₹20,000 ಕೋಟಿ ಬಂಡವಾಳ ಹೂಡಿಕೆನಿರೀಕ್ಷಿಸುತ್ತಿದೆ. ಮಸೂದೆಗೆ ಲೋಕಸಭೆ ಬುಧವಾರ ಅನುಮೋದನೆ ನೀಡಿತ್ತು. ರಾಜ್ಯಸಭೆ ಗುರುವಾರ ಅನುಮೋದನೆ ನೀಡಿತು. ಸಿಪಿಎಂ ಸದಸ್ಯ ಎಳಮರಂ ಕರೀಂ ಸೂಚಿಸಿದ ತಿದ್ದುಪಡಿಯನ್ನು ತಿರಸ್ಕರಿಸಲಾಯಿತು.

‘ಹೂಡಿಕೆ, ಉದ್ಯೋಗ ಮತ್ತು ಪ್ರಗತಿ ಮೇಲೆ ಈ ತಿದ್ದುಪಡಿ ಭಾರಿ ಪರಿಣಾಮ ಬೀರಲಿದೆ. ಇದುವರೆಗೂ ಎಂಟು ಟ್ರಸ್ಟ್‌ಗಳಿಂದ ಪ್ರಸ್ತಾವ ಬಂದಿದೆ. ಒಟ್ಟು ₹8,000 ಕೋಟಿ ಹೂಡಿಕೆ ನಿರೀಕ್ಷಿಸಲಾಗಿದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಸದನಕ್ಕೆ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.