ನವದೆಹಲಿ: ಖಾಲಿಸ್ತಾನಿ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಮೇಲಿನ ನಿಷೇಧವನ್ನು ಮಂಗಳವಾರ ಮತ್ತೆ ಐದು ವರ್ಷಗಳವರೆಗೆ ವಿಸ್ತರಿಸಿದ್ದು, ಈ ಸಂಘಟನೆ ದೇಶದ ಆಂತರಿಕ ಭದ್ರತೆಗೆ ಹಾನಿ ಉಂಟುಮಾಡುವ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಹೇಳಿದೆ.
ಮಂಗಳವಾರದ ಗೆಜೆಟ್ ಅಧಿಸೂಚನೆಯಲ್ಲಿ, ದೇಶದ ಸಮಗ್ರತೆ ಮತ್ತು ಭದ್ರತೆಗೆ ಹಾನಿಯಾಗುವ ಚಟುವಟಿಕೆಗಳಲ್ಲಿ ಎಸ್‌ಎಫ್‌ಜೆ ತೊಡಗಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ ಎಂದು ಎಂಎಚ್‌ಎ ಹೇಳಿದೆ.
ಈ ಹಿಂದೆ ಹೇರಲಾಗಿದ್ದ ಐದು ವರ್ಷಗಳ ನಿಷೇಧವು ಬುಧವಾರ ಕೊನೆಗೊಳ್ಳುತ್ತಿದೆ.
ಪ್ರತ್ಯೇಕ ಖಾಲಿಸ್ತಾನಕ್ಕಾಗಿ ಜನಾಭಿಪ್ರಾಯ ಸಂಗ್ರಹಹಿಸಲು ಕರೆ ನೀಡಿರುವ ಎಸ್‌ಎಫ್‌ಜೆ, ಪಂಜಾಬ್ ಮತ್ತು ಇತರೆಡೆಗಳಲ್ಲಿ ‘ರಾಷ್ಟ್ರವಿರೋಧಿ ಮತ್ತು ವಿಧ್ವಂಸಕ’ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಇದು ದೇಶದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಅಡ್ಡಿಪಡಿಸುವ ಉದ್ದೇಶ ಹೊಂದಿದೆ ಎಂದು ಅದು ಹೇಳಿದೆ.
ಸಂಘಟನೆಯು ಉಗ್ರಗಾಮಿ ಸಂಘಟನೆಗಳ ಜತೆಗೆ ನಿಕಟ ಸಂಪರ್ಕದಲ್ಲಿದೆ. ದೇಶದ ಒಕ್ಕೂಟದಿಂದ ಒಂದು ಪ್ರದೇಶದವನ್ನು ಬೇರ್ಪಡಿಸಿ ಪ್ರತ್ಯೇಕ ಖಾಲಿಸ್ತಾನ ಕಟ್ಟಲು ಪಂಜಾಬ್ ಮತ್ತು ಇತರೆಡೆಗಳಲ್ಲಿ ಉಗ್ರವಾದ ಮತ್ತು ಹಿಂಸಾತ್ಮಕ ಚಟುವಟಿಕೆಗಳನ್ನು ಬೆಂಬಲಿಸುತ್ತಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.