ADVERTISEMENT

ಅಮೃತಸರ: ಮುಗ್ಧ ಸಿಖ್‌ ಯುವಕರ ಬಿಡುಗಡೆಗೆ ಆಗ್ರಹಿಸಿ ಎಸ್‌ಜಿಪಿಸಿ ಪ್ರತಿಭಟನೆ

ಪಿಟಿಐ
Published 31 ಮಾರ್ಚ್ 2023, 13:59 IST
Last Updated 31 ಮಾರ್ಚ್ 2023, 13:59 IST
ಮುಗ್ಧ ಸಿಖ್‌ ಯುವಕರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಶಿರೋಮಣಿ ಗುರುದ್ವಾರ ಪರ್ಬಂಧಕ್‌ ಸಮಿತಿ (ಎಸ್‌ಜಿಪಿಸಿ) ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿತು –ಎಎಫ್‌ಪಿ ಚಿತ್ರ
ಮುಗ್ಧ ಸಿಖ್‌ ಯುವಕರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಶಿರೋಮಣಿ ಗುರುದ್ವಾರ ಪರ್ಬಂಧಕ್‌ ಸಮಿತಿ (ಎಸ್‌ಜಿಪಿಸಿ) ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿತು –ಎಎಫ್‌ಪಿ ಚಿತ್ರ   

ಅಮೃತಸರ: ಸಿಖ್‌ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್‌ಪಾಲ್‌ ಸಿಂಗ್‌ ಪತ್ತೆಗೆ ನಡೆಸಿದ ಕಾರ್ಯಾಚರಣೆ ವೇಳೆ ಬಂಧಿಸಿರುವ ಮುಗ್ಧ ಸಿಖ್‌ ಯುವಕರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಶಿರೋಮಣಿ ಗುರುದ್ವಾರ ಪರ್ಬಂಧಕ್‌ ಸಮಿತಿ (ಎಸ್‌ಜಿಪಿಸಿ) ಶುಕ್ರವಾರ ಇಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು.

ಎಸ್‌ಜಿಪಿಸಿ ಮುಖ್ಯ ಕಚೇರಿಯಿಂದ ಜಿಲ್ಲಾಡಳಿತದ ಸಂಕೀರ್ಣದವರೆಗೆ ಮೆರವಣಿಗೆ ಕೈಗೊಂಡ ಸಮಿತಿಯ ಸದಸ್ಯರು ಹೆಚ್ಚುವರಿ ಉಪ ಆಯುಕ್ತ ಸುರಿಂದರ್‌ ಸಿಂಗ್‌ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಪೊಲೀಸ್‌ ಕಾರ್ಯಾಚರಣೆ ವೇಳೆ ಕೆಲವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ದಾಖಲಿಸಿರುವ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಾಯಿಸಿದರು.

ADVERTISEMENT

ಈ ಮಧ್ಯೆ ವಶಕ್ಕೆ ತೆಗೆದುಕೊಂಡಿದ್ದ 360 ಮಂದಿ ಪೈಕಿ 348 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಪಂಜಾಬ್‌ ಸರ್ಕಾರ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.