ಭೋಪಾಲ್: ಬಾಲಿವುಡ್ ನಟರಾದ ಶಬಾನಾ ಅಜ್ಮಿ, ನಾಸಿರುದ್ದೀನ್ ಶಾ ಹಾಗೂ ಗೀತೆ ರಚನೆಕಾರ ಜಾವೇದ್ ಅಖ್ತರ್ ಟುಕ್ಡೆ-ಟುಕ್ಡೆ ಗ್ಯಾಂಗ್ ಸ್ಲೀಪರ್ ಸೆಲ್‌ನ ಸದಸ್ಯರು ಎಂದು ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ ಆಪಾದಿಸಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಹತ್ಯೆ ಮತ್ತು ಜಾರ್ಖಂಡ್‌ನಲ್ಲಿ ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣಗಳನ್ನು ಖಂಡಿಸದಿರುವುದು ಇವರ ಸಣ್ಣ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ನರೋತ್ತಮ ಮಿಶ್ರಾ ಆರೋಪಿಸಿದ್ದಾರೆ.
ಇತ್ತೀಚೆಗೆ, ಜಾರ್ಖಂಡ್‌ನಲ್ಲಿ ನಮ್ಮ ಮಗಳಿಗೆ ಬೆಂಕಿ ಹಚ್ಚಲಾಯಿತು. ಅವರು ಏನಾದರು ಹೇಳಿದರೆ? ಇಲ್ಲ. ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಇಂತಹ ಘಟನೆಯಾಗಿದ್ದಿದ್ದರೆ ನಾಸಿರುದ್ದೀನ್ ಶಾ ಅವರಿಗೆ ದೇಶದಲ್ಲಿರಲು ಭಯವಾಗುತ್ತಿತ್ತು. ಪ್ರಶಸ್ತಿ ವಾಪಸ್ ಮಾಡುವ ಗ್ಯಾಂಗ್ ಕೂಡ ಸಕ್ರಿಯವಾಗುತ್ತಿತ್ತು ಹಾಗೂ ಅವರೆಲ್ಲರೂ ಕೂಗಾಡುತ್ತಿದ್ದರು ಎಂದು ಮಿಶ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದು ಅವರ ಸಣ್ಣ ಮನಸ್ಥಿತಿಯನ್ನು ತೋರಿಸುತ್ತದೆ. ಅವರನ್ನು ಹೇಗೆ ಜಾತ್ಯತೀತರು ಅಥವಾ ಸಂಭಾವಿತರು ಎನ್ನಲು ಸಾಧ್ಯ? ಅವರೆಲ್ಲರ ಸ್ವಭಾವ ಬಹಿರಂಗವಾಗಿದೆ ಎಂದರು.
ಸಾಮಾನ್ಯವಾಗಿ ಶಬಾನಾ ಅಜ್ಮಿ, ಜಾವೇದ್ ಅಖ್ತರ್ ಮತ್ತು ನಾಸಿರುದ್ದೀನ್ ಶಾ ಮತ್ತಿತರು ಟುಕ್ಡೆ ಟುಕ್ಡೆ ಗ್ಯಾಂಗ್‌ನ ಸ್ಲೀಪರ್ ಸೆಲ್‌ನ ಸದಸ್ಯರು. ಉದಯಪುರದಲ್ಲಿ ಕನ್ಹಯ್ಯ ಲಾಲ್ ಹತ್ಯೆ ಬಗ್ಗೆ ಈ ಪೈಕಿ ಯಾರಾದರೊಬ್ಬರು ಮಾತನಾಡಿದ್ದಾರೆಯೇ? ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.