ADVERTISEMENT

ರಾಹುಲ್‌ಗೆ ಎಂಎಸ್‌ಪಿ ವಿಸ್ತೃತ ರೂಪ ಗೊತ್ತೇ: ಅಮಿತ್‌ ಶಾ ಪ್ರಶ್ನೆ

ಪಿಟಿಐ
Published 27 ಸೆಪ್ಟೆಂಬರ್ 2024, 14:43 IST
Last Updated 27 ಸೆಪ್ಟೆಂಬರ್ 2024, 14:43 IST
ಅಮಿತ್‌ ಶಾ
ಅಮಿತ್‌ ಶಾ   

ರೇವಾಡಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ‘ರಾಹುಲ್‌ ಬಾಬಾ... ನಿಮಗೆ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ವಿಸ್ತೃತ ರೂಪ ಏನೆಂದು ಗೊತ್ತೇ? ಮುಂಗಾರು ಮತ್ತು ಹಿಂಗಾರಿನಲ್ಲಿ ಯಾವ ಬೆಳೆ ಬೆಳೆಯುತ್ತಾರೆ ಎಂಬುದು ತಿಳಿದಿದೆಯೇ’ ಎಂದು ಶುಕ್ರವಾರ ಪ್ರಶ್ನಿಸಿದರು.

ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಭ್ರಷ್ಟಾಚಾರ ಮತ್ತು ಮೀಸಲಾತಿ ವಿಚಾರವಾಗಿ ಕಾಂಗ್ರೆಸ್‌ ಪಕ್ಷ ಮತ್ತು ರಾಹುಲ್‌ ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

‘ಎಂಎಸ್‌ಪಿ’ ಎಂದು ಹೇಳಿದರೆ ಮತಗಳು ಬರುತ್ತವೆ ಎಂದು ರಾಹುಲ್‌ ಬಾಬಾ ಅವರಿಗೆ ಕೆಲ ಎನ್‌ಜಿಒಗಳು ತಿಳಿಸಿವೆ. ಆದರೆ ಎಂಎಸ್‌ಪಿ ವಿಸ್ತೃತ ರೂಪ ಏನೆಂದು ಗೊತ್ತೇ ಎಂದು ಲೇವಡಿ ಮಾಡಿದರು.

ADVERTISEMENT

‘ಹರಿಯಾಣದ ಬಿಜೆಪಿ ಸರ್ಕಾರವು 24 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುತ್ತಿದೆ. ಕಾಂಗ್ರೆಸ್‌ ಆಡಳಿತ ಇರುವ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಎಷ್ಟು ಬೆಳೆಗಳಿಗೆ ಎಂಎಸ್‌ಪಿ ನೀಡಲಾಗುತ್ತಿದೆ’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಆಡಳಿತದ ಸಂದರ್ಭದಲ್ಲಿ ಒಂದು ಕ್ವಿಂಟಲ್‌ ಭತ್ತಕ್ಕೆ ₹1,300  ನೀಡಲಾಗುತ್ತಿತ್ತು. ಸದ್ಯ ಕ್ವಿಂಟಲ್‌ ಭತ್ತಕ್ಕೆ ₹2,300 ನೀಡಲಾಗುತ್ತಿದೆ. ಹರಿಯಾಣದಲ್ಲಿ ಮತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿ ಕ್ವಿಂಟಲ್‌ ಭತ್ತಕ್ಕೆ ₹3,100 ನೀಡಲಾಗುವುದು ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.