ADVERTISEMENT

ಕಾರ್ಯಕರ್ತರ ವರ್ತನೆ ಮಿತಿ ಮೀರಿದೆ: ರಾಹುಲ್‌ಗೆ ಪತ್ರ ಬರೆದ ಶರ್ಮಿಷ್ಠ ಮುಖರ್ಜಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಫೆಬ್ರುವರಿ 2024, 11:35 IST
Last Updated 9 ಫೆಬ್ರುವರಿ 2024, 11:35 IST
<div class="paragraphs"><p>ಶರ್ಮಿಷ್ಠ ಮುಖರ್ಜಿ ಮತ್ತು&nbsp;ರಾಹುಲ್ ಗಾಂಧಿ</p></div>

ಶರ್ಮಿಷ್ಠ ಮುಖರ್ಜಿ ಮತ್ತು ರಾಹುಲ್ ಗಾಂಧಿ

   

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠ ಮುಖರ್ಜಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬಹಿರಂಗ ಪತ್ರ ಬರೆದಿದ್ದು, ಪಕ್ಷದ ಕಾರ್ಯಕರ್ತರ ವರ್ತನೆ ಮಿತಿ ಮೀರಿದೆ ಎಂದು ಟೀಕಿಸಿದ್ದಾರೆ.

ರಾಹುಲ್ ಗಾಂಧಿಗೆ ಬರೆದ ಪತ್ರವನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವ ಶರ್ಮಿಷ್ಠ, ದೆಹಲಿ ಪೊಲೀಸರಿಗೂ ಟ್ಯಾಗ್ ಮಾಡಿದ್ದಾರೆ. ಕಾಂಗ್ರೆಸ್ ಬೆಂಬಲಿಗನೊಬ್ಬ ನನ್ನ ಮತ್ತು ನನ್ನ ತಂದೆಯನ್ನು ‘ಲೈಂಗಿಕ ಅರ್ಥದೊಂದಿಗೆ ಅತ್ಯಂತ ಕೆಟ್ಟದಾಗಿ ನಿಂದಿಸಿ ‘ಎಕ್ಸ್‌’ನಲ್ಲಿ ಸರಣಿ ಪೋಸ್ಟ್ ಮಾಡಿದ್ದಾನೆ’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಕಾಂಗ್ರೆಸ್ ಬೆಂಬಲಿಗ ಎಂದು ಹೇಳಲಾದ ಕೆ.ಆರ್. ನವೀನ್ ಶಶಿ ಎಂಬುವರು ‘ಎಕ್ಸ್‌’ನಲ್ಲಿ ಮಾಡಿರುವ ಪೋಸ್ಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಶರ್ಮಿಷ್ಠ ಮುಖರ್ಜಿ ಹಂಚಿಕೊಂಡಿದ್ದಾರೆ.

‘ಪ್ರಣಬ್‌ ಮೈ ಫಾದರ್‌: ಎ ಡಾಟರ್‌ ರಿಮೆಂಬರ್ಸ್‌’ ಕೃತಿ ಬಿಡುಗಡೆಯಾದಾಗಿನಿಂದಲೂ ಆರೋಪಿ ಕೆಟ್ಟದಾಗಿ ನಿಂದಿಸುತ್ತಿದ್ದಾನೆ ಎಂದು ಶರ್ಮಿಷ್ಠ ದೂರಿದ್ದಾರೆ.

ಕಾಂಗ್ರೆಸ್ ನಾಯಕರಾದ ಪವನ್ ಖೇರಾ, ಅಜಯ್ ಮಾಕನ್ ಮತ್ತು ಬಿ.ವಿ.ಶ್ರೀನಿವಾಸ್ ಅವರ ಬೆಂಬಲಿಗರು ಅವಹೇಳನಕಾರಿಯಾಗಿ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ ಎಂದು ರಾಹುಲ್‌ಗೆ ಬರೆದ ಪತ್ರದಲ್ಲಿ ಶರ್ಮಿಷ್ಠ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.