ನವದೆಹಲಿ: ಸಲ್ಮಾನ್ ರಶ್ದಿ ಅವರು ಬರೆದ ‘ವಿಕ್ಟರಿ ಸಿಟಿ’ ಪುಸ್ತಕದ ಕುರಿತು ಭಾರಿ ಮೆಚ್ಚುಗೆ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ, ಲೇಖಕ ಶಶಿ ತರೂರ್, ‘ಭಾರತದ ಅದ್ಬುತ ಬರಹಗಾರ’ನಿಗೆ ನೊಬೆಲ್ ಪ್ರಶಸ್ತಿ ನೀಡಲು ಇನ್ನೂ ತಡಮಾಡಬಾರದು’ ಎಂದು ಮಂಗಳವಾರ ಹೇಳಿದ್ದಾರೆ.
ವಿಜಯನಗರ ಸಂಸ್ಥಾನದ ಹಂಪಿ ನಗರ ಕುರಿತು ರಶ್ದಿ ಅವರು ‘ವಿಕ್ಟರಿ ಸಿಟಿ’ ಕೃತಿ ರಚಿಸಿದ್ದಾರೆ.
‘ನಾನು ಈಗಷ್ಟೇ ರಶ್ದಿ ಅವರ ಅತ್ಯದ್ಬುತವಾದ ‘ವಿಕ್ಟರಿ ಸಿಟಿ’ ಪುಸ್ತಕವನ್ನು ಓದಿ ಮುಗಿಸಿದೆ. ವಿಜಯನಗರ ಸಂಸ್ಥಾನದ ಇತಿಹಾಸವನ್ನು ತಮ್ಮ ಆಧುನಿಕ ದೃಷ್ಟಿಕೋನದ ಮೂಲಕ ಕಟ್ಟಿಕೊಟ್ಟಿದ್ದಾರೆ. ಎಂದಿನಂತೆ ಬಹಳ ಚಂದವಾಗಿ, ಲವಲವಿಕೆ ಹಾಗೂ ಉತ್ಸಾಹದಿಂದ ಈ ಪುಸ್ತಕ ಬರೆದಿದ್ದಾರೆ’ ಎಂದು ತರೂರ್ ಟ್ವೀಟ್ ಮಾಡಿದ್ದಾರೆ.
‘ರಶ್ದಿ ಅವರಿಗೆ ಇನ್ನೂವರೆಗೂ ನೊಬೆಲ್ ಪ್ರಶಸ್ತಿ ದೊರೆತಿಲ್ಲ. ಆದರೆ, ಈ ಪ್ರಶಸ್ತಿಯನ್ನು ನೀಡಲು ಇನ್ನೂ ತಡಮಾಡುವುದು ಸರಿಯಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.