ADVERTISEMENT

LS polls | ತರೂರ್ VS ರಾಜೀವ್: ತಿರುವನಂತಪುರದಲ್ಲಿ ಯಾರಿಗೆ ಒಲಿಯಲಿದೆ ಅದೃಷ್ಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಮಾರ್ಚ್ 2024, 16:18 IST
Last Updated 8 ಮಾರ್ಚ್ 2024, 16:18 IST
<div class="paragraphs"><p>ರಾಜೀವ್‌ ಚಂದ್ರಶೇಖರ್‌ ಮತ್ತು ಶಶಿ ತರೂರ್</p></div>

ರಾಜೀವ್‌ ಚಂದ್ರಶೇಖರ್‌ ಮತ್ತು ಶಶಿ ತರೂರ್

   

ನವದೆಹಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು (ಶುಕ್ರವಾರ) ಪ್ರಕಟಿಸಿದೆ.

ಕರ್ನಾಟಕದಲ್ಲಿ 7, ಛತ್ತೀಸಗಢ 6, ಕೇರಳ– 16, ಲಕ್ಷದ್ವೀಪ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ ತಲಾ 1, ಮೇಘಾಲಯ 2; ತೆಲಂಗಾಣ– 4 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದೆ.

ADVERTISEMENT

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಬಾರಿಯೂ ಕೇರಳದ ವಯನಾಡ್‌ನಿಂದ ಸ್ಪರ್ಧಿಸಲಿದ್ದಾರೆ. ಕೇರಳದ ಅಲಪ್ಪುಳದಿಂದ ಕೆ.ಸಿ.ವೇಣುಗೋಪಾಲ್, ತಿರುವನಂತಪುರದಿಂದ ಶಶಿ ತರೂರ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಛತ್ತೀಸಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ರಾಜನಾನಂದಗಾಂವ್‌ನಿಂದ ಕಣಕ್ಕಿಳಿಸುವುದಾಗಿ ಪಕ್ಷ ಹೇಳಿದೆ.

ತಿರುವನಂತಪುರದಲ್ಲಿ ಶಶಿ ತರೂರ್ VS ರಾಜೀವ್ ಚಂದ್ರಶೇಖರ್

ತಿರುವನಂತಪುರದಿಂದ ಹಾಲಿ ಸಂಸದ ಶಶಿ ತರೂರ್ ಅವರಿಗೆ ಕಾಂಗ್ರೆಸ್ ಮತ್ತೆ ಮಣೆ ಹಾಕಿದೆ. ಇತ್ತ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಬಿಜೆಪಿ ಅಭ್ಯರ್ಥಿಯಾಗಿರುವುದು ಕುತೂಹಲ ಹೆಚ್ಚಾಗುವಂತೆ ಮಾಡಿದೆ.

ರಾಜ್ಯಸಭಾ ಸದಸ್ಯರಾಗಿರುವ ರಾಜೀವ್‌ ಚಂದ್ರಶೇಖರ್ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಡಿದ್ದವು. ಆದರೆ, ಪಕ್ಷ ಅಂತಿಮವಾಗಿ ತಿರುವನಂತಪುರದಿಂದ ಟಿಕೆಟ್ ಘೋಷಿಸಿದೆ. ರಾಜೀವ್‌ ರಾಜ್ಯಸಭಾ ಸದಸ್ಯತ್ವ ಏಪ್ರಿಲ್‌ಗೆ ಮುಗಿಯಲಿದೆ.

ಕೇರಳದಲ್ಲಿ ಬಿಜೆಪಿ ಯಾವುದೇ ಲೋಕಸಭೆ ಸಂಸದರನ್ನು ಹೊಂದಿಲ್ಲದ ಕಾರಣ ರಾಜೀವ್‌ ಅವರನ್ನು ಕಣಕ್ಕಿಳಿಸುವ ಮೂಲಕ ಗೆಲುವಿನ ನಗೆ ಬೀರಲು ಸಜ್ಜಾಗಿದೆ. ಆದರೆ, ಅನುಭವಿ ರಾಜಕಾರಣಿ ತರೂರ್ ಅವರಿಗೆ ರಾಜೀವ್‌ ಸವಾಲೊಡ್ಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಏನಾಯಿತು?

2019ರ ಚುನಾವಣೆಯಲ್ಲಿ ಶಶಿ ತರೂರ್ ಅವರು 4 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದರೆ, ಇತ್ತ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಕುಮ್ಮನಂ ರಾಜಶೇಖರನ್‌ 3.16 ಲಕ್ಷ ಮತಗಳನ್ನು ಪಡೆದಿದ್ದರು. ತರೂರ್ 99,989 ಮತಗಳ ಅಂತರದಿಂದ ರಾಜಶೇಖರನ್‌ ವಿರುದ್ಧ ಗೆಲುವು ಸಾಧಿಸಿದ್ದರು.

ಶಬರಿಮಲೆ ಮಹಿಳೆಯರ ಪ್ರವೇಶ ವಿಷಯವು ಬಿಜೆಪಿಯ ಪರವಾಗಿ ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.