ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಇಂದ್ರಾಣಿ ಮುಖರ್ಜಿ ಅವರನ್ನು ಮುಂಬೈಯ ಭಾಯ್‌ಕಳ ಜೈಲಿನಿಂದ ಶುಕ್ರವಾರ ಬಿಡುಗಡೆ ಮಾಡಲಾಗಿದೆ.
ಮಗಳನ್ನೇ (ಶೀನಾ ಬೋರಾ) ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಇಂದ್ರಾಣಿ ಮುಖರ್ಜಿಗೆ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ನೀಡಿತ್ತು.
ಇಂದ್ರಾಣಿ ಅವರು 2015ರಿಂದ ಜೈಲಿನಲ್ಲಿದ್ದಾರೆ. ಪ್ರಕರಣದಲ್ಲಿ 237 ಸಾಕ್ಷಿಗಳ ಪಟ್ಟಿ ಮಾಡಲಾಗಿದೆ. ಈವರೆಗೆ 68 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ. ಹಾಗಾಗಿ, ವಿಚಾರಣೆಯು ಸದ್ಯಕ್ಕೆ ಪೂರ್ಣಗೊಳ್ಳದು ಎಂದು ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ನೇತೃತ್ವದ ಪೀಠವು ಹೇಳಿತ್ತು.
ಶೀನಾ ಬೋರಾ (24) ಅವರನ್ನು 2012ರ ಏಪ್ರಿಲ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಇಂದ್ರಾಣಿ ಮುಖರ್ಜಿ, ಅವರ ಚಾಲಕನಾಗಿದ್ದ ಶ್ಯಾಮವರ್ ರಾಯ್ ಮತ್ತು ಇಂದ್ರಾಣಿ ಅವರ ಮೊದಲ ಪತಿ ಸಂಜೀವ್ ಖನ್ನಾ ಅವರು ಕಾರಿನಲ್ಲಿ ಶೀನಾ ಅವರನ್ನು ಉಸಿರುಗಟ್ಟಿಸಿ ಕೊಂದಿದ್ದಾರೆ. ಮೃತದೇಹವನ್ನು ಕಾಡಿನಲ್ಲಿ ಸುಡಲಾಗಿದೆ ಎಂಬ ಆರೋಪ ಅವರ ವಿರುದ್ಧ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.