ADVERTISEMENT

ದೆಹಲಿ ಕಾಂಗ್ರೆಸ್‌ನ ನೂತನ ಅಧ್ಯಕ್ಷೆಯಾಗಿ ಶೀಲಾ ದೀಕ್ಷಿತ್‌ ನೇಮಕ

ಪಿಟಿಐ
Published 10 ಜನವರಿ 2019, 13:21 IST
Last Updated 10 ಜನವರಿ 2019, 13:21 IST
ಶೀಲಾ ದೀಕ್ಷಿತ್‌
ಶೀಲಾ ದೀಕ್ಷಿತ್‌    

ನವದೆಹಲಿ:ದೆಹಲಿ ಪ್ರದೇಶ ಕಾಂಗ್ರೆಸ್‌ ಸಮಿತಿಯ(ಡಿಪಿಸಿಸಿ) ನೂತನ ಅಧ್ಯಕ್ಷೆಯಾಗಿ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ನೇಮಕವಾಗಿದ್ದಾರೆ.

ಅಜಯ್‌ ಮಕನ್‌ ಅವರು ಅನಾರೋಗ್ಯದ ಕಾರಣಕ್ಕೆ ರಾಜೀನಾಮೆ ನೀಡಿದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಶೀಲಾ ದೀಕ್ಷಿತ್‌ ಅವರನ್ನು ನೇಮಕ ಮಾಡಲಾಗಿದೆ. ಆದರೆ, ನೇಮಕವನ್ನು ಪಕ್ಷ ಅಧಿಕೃತವಾಗಿ ಪಕಟಿಸಬೇಕಿದೆ.

ನೂತನ ಅಧ್ಯಕ್ಷೆ ಶೀಲಾ ದೀಕ್ಷಿತ್‌ ಅವರಿಗೆ ಅಭಿನಂದನೆ ಸಲ್ಲಿಸಿರುವ ಅಜಯ್‌ ಮಕನ್‌, ತಮ್ಮ ನಾಯಕತ್ವದಲ್ಲಿ ಕಾಂಗ್ರೆಸ್‌ ರಾಷ್ಟ್ರ ರಾಜಧಾನಿಯಲ್ಲಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪ್ರಬಲವಾದ ವಿರೋಧದ ಪಾತ್ರವನ್ನು ವಹಿಸುತ್ತದೆ ಎಂದು ನಾನು ನಂಬಿದ್ದೇನೆ ಎಂದು ಹೇಳಿದ್ದಾರೆ.

ADVERTISEMENT

ಶೀಘ್ರದಲ್ಲಿಯೇ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿದ್ದು, ನೂತನ ಅಧ್ಯಕ್ಷರಿಗೆ ನೆರವಾಗಲು ಐವರು ಕಾರ್ಯಕಾರಿ ಅಧ್ಯಕ್ಷರು ಇರುತ್ತಾರೆ ಎಂದು ಹೇಳಿದ್ದಾರೆ.

ಶೀಲಾ ದೀಕ್ಷಿತ್‌ ಅವರು ಮೂರು ಬಾರಿ ದೆಹಲಿ ಮುಖ್ಯಮಂತ್ರಿಯಾಗಿದ್ದರು.

ಪಕ್ಷ ಗೌರವಿಸಿದೆ: ಶೀಲಾ ದೀಕ್ಷಿತ್‌
‘ಪಕ್ಷ ನನಗೆ ಈ ಅವಕಾಶ ನೀಡಿ ಗೌರವಿಸಿದೆ’ ಎಂದು ಶೀಲಾ ದೀಕ್ಷಿತ್‌ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.