ADVERTISEMENT

ನವದೆಹಲಿಯಲ್ಲಿ ಅಜಯ್ ಮಕೇನ್, ಈಶಾನ್ಯ ದೆಹಲಿಯಲ್ಲಿ ಶೀಲಾ ದೀಕ್ಷಿತ್ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 9 ಮೇ 2019, 17:28 IST
Last Updated 9 ಮೇ 2019, 17:28 IST
   

ದೆಹಲಿ: ಕಾಂಗ್ರೆಸ್ ಪಕ್ಷ ದೆಹಲಿಯ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಡಿಪಿಸಿಸಿ ಅಧ್ಯಕ್ಷೆ ಶೀಲಾ ದೀಕ್ಷಿತ್ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ದೆಹಲಿ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಅಜಯ್ ಮಕೇನ್ ನವದೆಹಲಿಯಲ್ಲಿ ಸ್ಪರ್ಧಿಸಲಿದ್ದು, ಚಾಂದ್ನಿ ಚೌಕ್‌ನಿಂದ ಜೆಪಿ ಅಗರವಾಲ್, ಪೂರ್ವ ದೆಹಲಿಯಿಂದ ಅರವಿಂದ್ ಸಿಂಗ್ ಲವ್ಲೀ, ಪಶ್ಚಿಮ ದೆಹಲಿಯಿಂದ ಮಹಾಬಲ್ ಮಿಶ್ರಾ ಮತ್ತು ವಾಯವ್ಯ ದೆಹಲಿಯಿಂದ ರಾಜೇಶ್ ಲಿಲೊಥಿಯಾ ಕಣಕ್ಕಿಳಿಯಲಿದ್ದಾರೆ.

ದಕ್ಷಿಣ ದೆಹಲಿಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿ ಹೆಸರನ್ನು ಪಕ್ಷ ಇಲ್ಲಿವರೆಗೆ ಬಿಡುಗಡೆ ಮಾಡಿಲ್ಲ.

ADVERTISEMENT

ನಾನು ಈ ಹಿಂದೆ ಈಶಾನ್ಯ ದೆಹಲಿಯಿಂದ ಸ್ಪರ್ಧಿಸಿದ್ದೆ. ಅಲ್ಲಿಯ ಜನರಿಗೆ ನನ್ನನ್ನು ಗೊತ್ತು, ನನಗೂ ಅವರ ಬಗ್ಗೆ ಗೊತ್ತಿದೆ, ನಾವು ಇಲ್ಲಿಂದ ಮೆಟ್ರೊ ಆರಂಭಿಸಿದ್ದೆವು. ನಾವು ಜನರಿಗಾಗಿ ಕೆಲಸ ಮಾಡುತ್ತೇವೆ ಎಂದು ಶೀಲಾ ದೀಕ್ಷಿತ್ ಹೇಳಿಕೆಯನ್ನು ಎಎನ್‌ಐ ಸುದ್ದಿ ಸಂಸ್ಥೆ ವರದಿಯಲ್ಲಿ ಉಲ್ಲೇಖಿಸಿದೆ.

ಭಾನುವಾರ ಆಮ್ ಆದ್ಮಿ ಪಕ್ಷ ಹರಿಯಾಣದಲ್ಲಿ ಸ್ಪರ್ಧಿಸುವ 6 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ 6 ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ ಕೂಡಾ ನಾಲ್ವರು ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿತ್ತು.ಬಿಜೆಪಿಯಿಂದ ಹರ್ಷ ವರ್ಧನ್ ಚಾಂದ್ನಿ ಚೌಕ್, ವಾಯವ್ಯ ದೆಹಲಿಯಿಂದ ಮನೋಜ್ ತಿವಾರಿ, ದಕ್ಷಿಣ ದೆಹಲಿಯಿಂದ ರಮೇಶ್ ಬಿಧೂರಿ ಮತ್ತು ಪಶ್ಚಿಮ ದೆಹಲಿಯಿಂದ ಪ್ರವೇಶ್ ವರ್ಮಾ ಸ್ಪರ್ಧಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.