ಲಖನೌ : ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಅನುಷ್ಠಾನಕ್ಕೆ ಒಲವು ವ್ಯಕ್ತಪಡಿಸಿರುವ ಉತ್ತರ ಪ್ರದೇಶ ಶಿಯಾ ಕೇಂದ್ರೀಯ ವಕ್ಫ್ ಮಂಡಳಿ (ಯುಪಿಎಸ್‌ಸಿಡಬ್ಲ್ಯುಬಿ), ಇದರಿಂದ ಭಾರತದಲ್ಲಿರುವ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ ಎಂದು ಗುರುವಾರ ಪ್ರತಿಪಾದಿಸಿದೆ.
‘ಹಿಂದೂಸ್ಥಾನದಲ್ಲಿರುವ ಮುಸ್ಲಿಮರಿಗೆ ಎನ್‌ಆರ್‌ಸಿಯಿಂದ ಯಾವುದೇ ಬೆದರಿಕೆ, ತೊಂದರೆ ಇಲ್ಲ. ಇದನ್ನು ದೇಶದಲ್ಲಿ ಜಾರಿಗೆ ತರ ಲೇಬೇಕು. ದೇಶಕ್ಕೆ ಮಾರಕವಾಗಿ ಪರಿ ಣಮಿಸಿರುವ ಒಳನುಸುಳುಕೋರರಿಗೆ ಮಾತ್ರ ಇದರಿಂದ ತೊಂದರೆ’ ಎಂದು ಮಂಡಳಿ ಅಧ್ಯಕ್ಷ ವಾಸೀಂ ರಿಜ್ವಿ ಹೇಳಿದ್ದಾರೆ.
‘ಒಳನುಸುಳುಕೋರರನ್ನು ಟಿಎಂಸಿ ಮತ್ತು ಎಸ್‌ಪಿ ಮತ ಬ್ಯಾಂಕ್ ಮಾಡಿಕೊಂಡಿವೆ. ಬಾಂಗ್ಲಾದೇಶ, ಪಾಕಿ ಸ್ತಾನ, ಅಫ್ಗಾನಿಸ್ತಾನದ ಒಳನುಸುಳುಕೋರರಿಗೆ ಮತದಾರರ ಗುರತಿನ ಚೀಟಿ ಒದಗಿಸುವಲ್ಲಿ ಕಾಂಗ್ರೆಸ್ ಸಹಕರಿಸುತ್ತಿದೆ. ಎನ್‌ಆರ್‌ಸಿ ಜಾರಿಗೆ ಬಂದರೆ ಅವರ ನಿಜವಾದ ಮುಖ ಬಯಲಾಗುತ್ತದೆ’ ಎಂದು ಅವರು ಆರೋಪಿಸಿದ್ದಾರೆ.
‘ದೌರ್ಜನ್ಯಕ್ಕೊಳಗಾದ ಹಿಂದೂಗಳು ಭಾರತಕ್ಕೆ ಬಂದಿದ್ದಾರೆ. ಆದರೆ ಮುಸ್ಲಿಮರು ವೈಯಕ್ತಿಕ ಲಾಭಕ್ಕಾಗಿ ಅಥವಾ ಭಾರತಕ್ಕೆ ಹಾನಿ ಮಾಡುವ ಉದ್ದೇಶದಿಂದ ಬಂದಿದ್ದಾರೆ. ಭಾರತೀಯ ಮುಸ್ಲಿಮರು ಮಾತ್ರ ಹಿಂದೂಸ್ತಾನಿಗಳು, ಉಳಿದವರು ಅಕ್ರಮವಾಗಿ ಒಳನುಗ್ಗಿದವರು, ಅವರು ದೇಶವನ್ನು ತೊರೆಯಲೇಬೇಕು’ ಎಂದು ಪ್ರತಿಪಾದಿಸಿರುವ ರಿಜ್ವಿ, ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿಸಿ ನಡೆದಿರುವ ಪ್ರತಿಭಟನೆಗಳ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಆರೋಪಿಸಿದ್ದಾರೆ.
ಕಾಯ್ದೆ ಬೆಂಬಲಿಸಿ ಕಣಿವೆಯಲ್ಲಿ ರ‍್ಯಾಲಿ: (ಜಮ್ಮು)ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಬೆಂಬಲಿಸಿ ಕಾಶ್ಮೀರಿ ವಲಸಿಗರು, ಮುಸ್ಲಿಮರು ಸೇರಿದಂತೆ ನೂರಾರು ಮಂದಿ ಗುರುವಾರ ಇಲ್ಲಿ ರ‍್ಯಾಲಿ ನಡೆಸಿದರು.
‘ಮುಸ್ಲಿಮರು ರಾಜಕೀಯ ಪಕ್ಷಗಳ ಬಲೆಗೆ ಬೀಳದಿರಿ’ ಎಂದು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಜಗ್ತಿ ವಲಸಿಗರ ಶಿಬಿರದ ಅಧ್ಯಕ್ಷ ಪಿ.ಎನ್. ಭಟ್ ಮನವಿ ಮಾಡಿದರು.‘ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತರು ದಶಕಗಳಿಂದ ಭಾರತದಲ್ಲಿ ನೆಲೆಸಿದ್ದಾರೆ. ಅವರಿಗೆ ಪೌರತ್ವ ನೀಡುವುದನ್ನು ನಾವು ಸ್ವಾಗತಿಸುತ್ತೇವೆ’ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.