ಮುಂಬೈ: ಜಗತ್ತಿನ ಮಾನವೀಯತೆ ಸಿದ್ಧಾಂತಕ್ಕೆ ಶಿರಡಿಯ ಸಾಯಿಬಾಬಾನ ನಂಬಿಕೆ ಮತ್ತು ತಾಳ್ಮೆಯೇ ಸ್ಫೂರ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಹಾರಾಷ್ಟ್ರದ ಶಿರಡಿಯಲ್ಲಿ ನಡೆಯುತ್ತಿರುವ ಸಾಯಿ ಬಾಬಾ ಸಮಾಧಿಯ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.
ಶಿರಡಿ ಸಾಯಿಬಾಬಾ ದೇವಾಲಯದ ಭೇಟಿ ಪುಸ್ತಕದಲ್ಲಿ, ‘ಸಾಯಿಬಾಬಾನದರ್ಶನದ ನಂತರ ನನ್ನಲ್ಲಿ ಅಗಾಧವಾದ ಶಾಂತಿ ಮೂಡಿದೆ. ಶಿರಡಿಯು ಎಲ್ಲಾ ಧರ್ಮಗಳ ಸಮಾನತೆಗೆ ಸಾಕ್ಷಿಯಾಗಿದೆ. ಇಂದಿನ ಜಾಗತಿಕ ಸಂದರ್ಭದಲ್ಲಿ ಎಲ್ಲರ ಒಡೆಯ ಒಬ್ಬನೇ ಎಂಬ ಸಾಯಿಬಾಬಾ ಅವರ ಮಂತ್ರ ಜಗತ್ತಿನ ಶಾಂತಿಗೆ ಮುಖ್ಯವಾಗಿದೆ’ ಎಂದು ಬರೆದಿದ್ದಾರೆ.
ಸಾಯಿಬಾಬಾ ಅವರ ಭಕ್ತರಿಗೆ ದೇವರು ಒಳ್ಳೆಯದು ಮಾಡಲಿ. ಶಾಂತಿ ಮತ್ತು ಸಂತಸ ಕರುಣಿಸಲಿ ಎಂದು ಶುಭ ಹಾರೈಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.