ಶಿರಡಿ: ಶಿರಡಿ ಸಾಯಿಬಾಬ ಜನ್ಮಸ್ಥಳದ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆಯನ್ನು ಖಂಡಿಸಿ ಶಿರಡಿಯಲ್ಲಿ ಭಾನುವಾರ ಬಂದ್ ನಡೆಸಲಾಯಿತು. ಸ್ಥಳೀಯ ನಿವಾಸಿಗಳು ಕರೆ ನೀಡಿದ್ದ ಬಂದ್‌ಗೆ ಶಿರಡಿ ಸಂಸದ ಸದಾಶಿವ ಲೋಖಂಡೆ ಕೂಡಾ ಬೆಂಬಲ ವ್ಯಕ್ತಪಡಿಸಿದರು.
ಸಾಯಿಬಾಬಾ ಹುಟ್ಟಿದ ಸ್ಥಳಪರ್ಭಾನಿ ಜಿಲ್ಲೆಯ ಪಾಥರಿ ಅಭಿವೃದ್ಧಿಗೆ ₹100 ಕೋಟಿ ಅನುದಾನ ನೀಡುವುದಾಗಿ ಠಾಕ್ರೆ ಪ್ರಕಟಿಸಿದ ಬಳಿಕ ವಿವಾದ ಭುಗಿಲೆದ್ದಿತ್ತು. ಹೇಳಿಕೆ ಹಿಂಪಡೆಯಲು ಸ್ಥಳೀಯರು ಆಗ್ರಹಿಸಿದ್ದಾರೆ.
*
ನಾನು ಮೊದಲು ಸಾಯಿಬಾಬ ಭಕ್ತ, ನಂತರ ಸಂಸದ. ಪ್ರತಿಭಟನೆಗೆ ನನ್ನ ಬೆಂಬಲವಿದೆ. ಈ ಕುರಿತು ಸಿಎಂ ಜೊತೆ ಚರ್ಚಿಸುತ್ತೇನೆ.
-ಸದಾಶಿವ ಲೋಖಂಡೆ, ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.