ನವದೆಹಲಿ: ಶಿವಸೇನಾ ಸಂಸದ ರಾಹುಲ್ ಶೇವಳೆ ಅವರನ್ನು ಸಂಸತ್‌ನಲ್ಲಿ ಪಕ್ಷದ ನಾಯಕರನ್ನಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನೇಮಕ ಮಾಡಿದ್ದಾರೆ.
ಲೋಕಸಭೆಯ ಕಾರ್ಯಾಲಯದಿಂದ ಮಂಗಳವಾರ ರಾತ್ರಿ ಈ ಕುರಿತ ಅಧಿಸೂಚನೆ ಹೊರಡಿಸಲಾಗಿದೆ.
ಸಂಸತ್‌ನ ಕೆಳಮನೆಯಲ್ಲಿ ನಮ್ಮ ನಾಯಕರಾಗಿ ಸಂಸದ ರಾಹುಲ್ ಶೇವಳೆ ಅವರನ್ನು ನೇಮಕ ಮಾಡುವಂತೆ ಕೋರಿ ಕನಿಷ್ಠ 12 ಶಿವಸೇನಾ ಸಂಸದರು ಸ್ಪೀಕರ್ ಅವರಿಗೆ ಪತ್ರ ಬರೆದಿದ್ದರು.
ಅದಕ್ಕೂ ಮುನ್ನ, ಮಹಾರಾಷ್ಟ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಲೋಕಸಭೆಯಲ್ಲಿ ಶಿವಸೇನಾ ನಾಯಕರಾಗಿ ರಾಹುಲ್ ಅವರನ್ನು ನೇಮಕ ಮಾಡಿದ್ದರು.
ಶಿವಸೇನಾದ 12 ಸಂಸದರು ನಮ್ಮ ಜತೆ ಇದ್ದಾರೆ ಎಂದು ಸಿಎಂ ಏಕನಾಥ ಶಿಂದೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.