ADVERTISEMENT

ಲೋಕಸಭೆಯಲ್ಲಿ ಹನುಮಾನ್‌ ಚಾಲೀಸಾ ಪಠಿಸಿದ ಸಂಸದ ಶ್ರೀಕಾಂತ್‌ ಶಿಂದೆ

ಪಿಟಿಐ
Published 8 ಆಗಸ್ಟ್ 2023, 13:07 IST
Last Updated 8 ಆಗಸ್ಟ್ 2023, 13:07 IST
ಶ್ರೀಕಾಂತ್‌ ಶಿಂದೆ
ಶ್ರೀಕಾಂತ್‌ ಶಿಂದೆ    

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಪುತ್ರ, ಸಂಸದ ಶ್ರೀಕಾಂತ್‌ ಶಿಂದೆ ಮಂಗಳವಾರ ಲೋಕಸಭೆಯಲ್ಲಿ ಹನುಮಾನ್‌ ಚಾಲೀಸಾ ಪಠಿಸಿದರು.‌

ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಅವರು, ‘ಮಹಾರಾಷ್ಟ್ರದಲ್ಲಿ 2019ರಲ್ಲಿ ಶಿವಸೇನಾ–ಬಿಜೆಪಿ ಮೈತ್ರಿಕೂಟಕ್ಕೆ ಜನರು ಬಹುಮತ ನೀಡಿದ್ದರು. ಆದರೆ ಉದ್ಧವ್‌ ಠಾಕ್ರೆ ಕಾಂಗ್ರೆಸ್‌, ಎನ್‌ಸಿಪಿ ಜೊತೆ ಸೇರುವ ಮೂಲಕ ಮತದಾರಿಗೆ ಅನ್ಯಾಯ ಮಾಡಿದರು. ಮುಖ್ಯಮಂತ್ರಿಯಾಗಬೇಕೆಂಬ ಉದ್ದೇಶದಿಂದ ಬಾಳಾ ಸಾಹೇಬ್‌ ಸಿದ್ಧಾಂತ ಮತ್ತು ಹಿಂದುತ್ವ ಸಿದ್ಧಾಂತವನ್ನು ಗಾಳಿಗೆ ತೂರಿದರು. ಅಷ್ಟೆ ಅಲ್ಲದೆ, 1990ರಲ್ಲಿ ಕರ ಸೇವಕರನ್ನೇ ಸುಟ್ಟ ಸಮಾಜವಾದಿ ಪಕ್ಷದೊಂದಿಗೂ ಮೈತ್ರಿ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ಜನರು ಹನುಮಾನ್‌ ಚಾಲೀಸಾ ಪಠಿಸುವುದನ್ನು ತಡೆಯಲಾಗುತ್ತಿದೆ. ನನಗೆ ಚಾಲೀಸಾ ಗೊತ್ತಿದೆ’ ಎಂದು ಹೇಳಿ ಪಠಿಸಲು ಆರಂಭಿಸಿದರು. ಆಗ ‘ಮಾತು ಮುಂದುವರೆಸುವಂತೆ ಸ್ಪೀಕರ್‌ ಸೂಚಿಸಿದ್ದರಿಂದ ಅರ್ಧಕ್ಕೆ ನಿಲ್ಲಿಸಿದರು.

ADVERTISEMENT

‘2018ರಲ್ಲೂ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು. ಆದರೆ ಎನ್‌ಡಿಎ ನೇತೃತ್ವದ ಸರ್ಕಾರ ಪುನಃ ಅಧಿಕಾರಕ್ಕೆ ಬಂದಿತ್ತು. ಈ ಬಾರಿಯೂ ವಿರೋಧ ಪಕ್ಷಗಳು ಅವಿಶ್ವಾಸ ಮಂಡಿಸಿವೆ. ಮುಂದಿನ ಚುನಾವಣೆಯಲ್ಲಿ ಎನ್‌ಡಿಎ 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಓದಿ... ಮಿತ್ರ ಪಕ್ಷಗಳ ನಡುವಿನ ನಂಬಿಕೆಯ ಪರೀಕ್ಷೆಗೆ ಅವಿಶ್ವಾಸ ನಿರ್ಣಯ ಮಂಡನೆ: ಮೋದಿ ಟೀಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.