ಮುಂಬೈ: ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟವು ಸೀಟು ಹಂಚಿಕೆ ಸೂತ್ರವನ್ನು ಅಂತಿಮಗೊಳಿಸಿರುವ ಬೆನ್ನಲ್ಲೇ ತನ್ನ ಪಾಲಿನ 85 ಸ್ಥಾನಗಳ ಪೈಕಿ 65 ಸ್ಥಾನಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶಿವಸೇನಾ (ಉದ್ಧವ್ ಬಣ) ಬುಧವಾರ ಬಿಡುಗಡೆಗೊಳಿಸಿದೆ.
ಬಹುಪಾಲು ಹಾಲಿ ಶಾಸಕರಿಗೆ ಶಿವಸೇನಾ ಈ ಬಾರಿಯು ಟಿಕೆಟ್ ನೀಡಿದ್ದು, ಮಾಜಿ ಸಚಿವ ಆದಿತ್ಯ ಠಾಕ್ರೆ ಅವರು ವರ್ಲಿ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿಯಲಿದ್ದಾರೆ.
ಆದಿತ್ಯ ಠಾಕ್ರೆ ಸಹೋದರ, ಯವಸೇನಾ ನಾಯಕ ವರುಣ್ ಸರ್ದೇಸಾಯಿ ಬಾಂದ್ರಾ(ಪೂರ್ವ)ದಿಂದ ಸ್ಪರ್ಧಿಸಲಿದ್ದಾರೆ. ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಕೊಪರಿ–ಪಂಚ್‌ಪಖಾಡಿ ಕ್ಷೇತ್ರದಲ್ಲಿ ಶಿವಸೇನಾವು (ಉದ್ಧವ್ ಬಣ) ಕೇದಾರ್ ದಿಘೆ ಅವರನ್ನು ಕಣಕ್ಕಿಳಿಸಿದೆ. ಕೇದಾರ್ ದಿಘೆ ಅವರು ಸೇನಾದ ನಾಯಕ ದಿವಂಗತ ಆನಂದ್ ದಿಘೆ ಅವರ ಸೋದರಳಿಯ. ಇವರನ್ನು ಶಿಂಧೆ ಅವರ ರಾಜಕೀಯ ಮಾರ್ಗದರ್ಶಕನೆಂದೇ ಪರಿಗಣಿಸಲಾಗಿತ್ತು.
ಎಸ್‌ಪಿ 5 ಅಭ್ಯರ್ಥಿಗಳ ಘೋಷಣೆ:
ಅಖಿಲೇಶ್ ಯಾದವ್ ನೇತೃತ್ವದ ಎಸ್‌ಪಿ, ಎಂವಿಎ ಕೋಟಾದಿಂದ 12 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದು, ಸದ್ಯ ಐದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ.
Highlights -
Quote - ನಮ್ಮ ಜತೆಗೆ ಸಮಾಜವಾದಿ ಪಕ್ಷ ಪಿಡಬ್ಲ್ಯುಪಿ ಸಿಪಿಎಂ ಸಿಪಿಐ ಹಾಗೂ ಎಎಪಿ ಜತೆ ಸೇರಿಸಿಕೊಂಡಿದ್ದೇವೆ. ಮಹಾಯುತಿ ಸರ್ಕಾರವನ್ನು ಸೋಲಿಸಲು ಎಂವಿಎ ಒಗ್ಗಟ್ಟಿನಿಂದ ನಿಂತಿದೆ –ಸಂಜಯ್ ರಾವುತ್ ಶಿವಸೇನಾ (ಯುಬಿಟಿ) ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.