ಮುಂಬೈ:ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ರಾಜ್ಯಸಭೆಯಲ್ಲಿ ಬಾಲಿವುಡ್ ಚಿತ್ರರಂಗವನ್ನು ಟೀಕಿಸುವವರ ವಿರುದ್ಧ ಹರಿಹಾಯ್ದಿರುವ ಸಂಸದೆ ಜಯಾಬಚ್ಚನ್ ಅವರ ನಡೆಯನ್ನು ಶಿವಸೇನೆ ಬೆಂಬಲಿಸಿದೆ.
'ಇಂಥ ಆರೋಪ ಮಾಡುವವರು ಆಷಾಢಭೂತಿತನದ ಧೋರಣೆ ಮತ್ತು ದ್ವಿಮುಖ ನೀತಿಯ ಚಾಳಿಯುಳ್ಳವರು’ ಎಂದು ಶಿವಸೇನೆ ತನ್ನ ಪಕ್ಷದ ಮುಖವಾಣಿ ’ಸಾಮ್ನಾ’ದ ಸಂಪಾದಕೀಯದಲ್ಲಿ ಹೇಳಿದೆ.
ಜಯಾಬಚ್ಚನ್ ಅವರ ಹೇಳಿಕೆಯನ್ನು ಬೆಂಬಲಿಸುವ ಜತೆಗೆ ಸಿನಿಮಾ ರಂಗದ ಎಲ್ಲ ಕಲಾವಿದರು ಮತ್ತು ತಂತ್ರಜ್ಞರು ಮಾದಕದ್ರವ್ಯಗಳ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಹೇಳುವವರಿಗೆ ಉದ್ದೀಪನಾ ಮದ್ದು ಪರೀಕ್ಷೆ (ಡೋಪಿಂಗ್ ಟೆಸ್ಟ್) ಮಾಡಬೇಕು ಎಂದು ಆಗ್ರಹಿಸಿದೆ.
ಭೋಜ್‌ಪುರಿ ನಟ ಮತ್ತು ಬಿಜೆಪಿ ಸಂಸದ ರವಿಕಿಶನ್ ಅವರು 'ಚಿತ್ರರಂಗದಲ್ಲಿ ಮಾದಕ ವ್ಯಸನದ ಸಮಸ್ಯೆ ಇದೆ’ ಎಂದು ಹೇಳಿಕೆ ನೀಡಿದ ಬೆನ್ನಲ್ಲಿ, ಜಯಾ ಬಚ್ಚನ್ ಅವರು ರಾಜ್ಯಸಭೆಯಲ್ಲಿ ಮಂಗಳವಾರ ಈ ರೀತಿ ಪ್ರತಿಕ್ರಿಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.