ADVERTISEMENT

ಶಿವಾಜಿ ಪ್ರತಿಮೆ ಕುಸಿತ ಪ್ರಕರಣ: ಶಿಲ್ಪ, ಸಲಹೆಗಾರ ಪೊಲೀಸ್‌ ಕಸ್ಟಡಿಗೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 16:05 IST
Last Updated 5 ಸೆಪ್ಟೆಂಬರ್ 2024, 16:05 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮುಂಬೈ: ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲೆಯ ರಾಜ್‌ಕೋಟ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಜಯದೀಪ್‌ ಆಪ್ಟೆ ಮತ್ತು ಚೇತನ್‌ ಪಾಟೀಲ ಅವರನ್ನು ನ್ಯಾಯಾಲಯ ಇದೇ 10ರವರೆಗೆ ಪೊಲೀಸ್‌ ಕಸ್ಟಡಿಗೆ ವಹಿಸಿದೆ.

ಠಾಣೆ ಮೂಲದ ಆಪ್ಟೆ ಅವರು ಶಿಲ್ಪಿ ಮತ್ತು ಗುತ್ತಿಗೆದಾರರಾಗಿದ್ದರೆ, ಕೊಲ್ಹಾಪುರ ಮೂಲದ ಪಾಟೀಲ ಅವರು ನಿರ್ಮಾಣ ಕ್ಷೇತ್ರದ ಸಲಹೆಗಾರ. ಶಿವಾಜಿ ಪ್ರತಿಮೆ ಆಗಸ್ಟ್‌ 26ರಂದು ಕುಸಿದಿತ್ತು. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಮಹಾರಾಷ್ಟ್ರದಲ್ಲಿ ಇದು ರಾಜಕೀಯ ಪಕ್ಷಗಳ ವಾಗ್ವಾದಕ್ಕೆ ಕಾರಣವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.