ಸಾಗರ್: ಚುನಾವಣೆಗೆ ಸಿದ್ಧವಾಗಿರುವ ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ಚೌಹಾಣ್ಗೋವು ಸಚಿವಾಲಯ ರೂಪಿಸುವ ಚಿಂತನೆ ನಡೆಸಿದ್ದಾರೆ.ಪ್ರಸ್ತುತವಿರುವ ಗೋವು ಸಂವರ್ಧನ್ ಮಂಡಳಿಯ ಬದಲಿಗೆ ಈ ರೀತಿ ಗೋವು ಸಚಿವಾಲಯ ರೂಪಿಸುವ ಯೋಜನೆ ಇದೆ ಎಂದು ಅವರು ಹೇಳಿದ್ದಾರೆ.
ಮಧ್ಯಪ್ರದೇಶದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಕಮಲ್ ನಾಥ್ ಅವರು ರಾಜ್ಯದಎಲ್ಲ ಗ್ರಾಮ ಪಂಚಾಯತ್‍ಗಳಲ್ಲಿ ಗೋವು ಆಶ್ರಯ ತಾಣವನ್ನು ನಿರ್ಮಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಚೌಹಾಣ್ ಭಾನುವಾರ ಈ ರೀತಿ ಹೊಸ ಘೋಷಣೆ ಹೊರಡಿಸಿದ್ದಾರೆ.
ಗೋವು ಆಶ್ರಯ ತಾಣವನ್ನು ನಿರ್ಮಿಸುವ ಮೂಲಕ ಕಾಂಗ್ರೆಸ್, ಪ್ರಾಣಿಗಳ ಮೇವಿನ ಸ್ಥಳವನ್ನು ಅತಿಕ್ರಮಣ ಮಾಡಲು ಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಭಾನುವಾರ ಭೋಪಾಲ್‍ನ ಈಶಾನ್ಯ ಭಾಗದಲ್ಲಿರುವ ಖುಜುರಾವೋದಲ್ಲಿ ಜನ ಆಶೀರ್ವಾದ್ ಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಚೌಹಾಣ್, ನಮ್ಮಲ್ಲಿ ಗೋವು ಸಂವರ್ಧನ್ ಮಂಡಳಿ ಇದೆ. ಆದರೆ ಗೋವು ಸಚಿವಾಲಯವೊಂದಿದ್ದರೆ ಉತ್ತಮ ಎಂದು ನನ್ನ ಅನಿಸಿಕೆ. ಮಂಡಳಿಗೆ ಆರ್ಥಿಕ ನಿರ್ಬಂಧಗಳಿವೆ, ಆದರೆ ಸಚಿವಾಲಯದಲ್ಲಿ ಈ ರೀತಿ ಇರಲ್ಲ.ಗೋಶಾಲೆಗಳು ಉತ್ತಮ ಯೋಚನೆಯೇ ಆಗಿದ್ದರೂ, ಹಸುಗಳನ್ನು ಮನೆಯಲ್ಲಿ ಸಾಕಿದರೆ ಒಳ್ಳೆಯದು ಎಂದುಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.