ಭೋಪಾಲ್: ‘ತಮ್ಮ ಪರವಾಗಿ ನಿಂದನೆ ಸ್ವೀಕರಿಸಲೂ ಕಾಂಗ್ರೆಸ್‌ನ ರಾಜ್ಯಸಭೆ ಸಂಸದ ದಿಗ್ವಿಜಯ್ ಸಿಂಗ್ ಅವರಿಗೆ ಕಮಲ್‌ನಾಥ್ ಅವರು ಪವರ್ ಆಫ್ ಅಟಾರ್ನಿ ನೀಡಿರುವಂತಿದೆ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಬುಧವಾರ ವ್ಯಂಗ್ಯವಾಡಿದ್ದಾರೆ.
‘ಪಕ್ಷದ ಮುಖಂಡ ವೀರೇಂದ್ರ ರಘುವಂಶಿಗೆ ಟಿಕೆಟ್ ಕೊಡುವ ವಿಚಾರವನ್ನು ದಿಗ್ವಿಜಯ್ ಮತ್ತು ಅವರ ಮಗನಿಗೆ ಬಿಟ್ಟಿದ್ದೇನೆ. ಟಿಕೆಟ್ ಹಿಂಚಿಕೆ ವಿಚಾರದಲ್ಲಿ ಆಗಿರುವ ಗೊಂದಲವನ್ನು ದಿಗ್ವಿಜಯ್ ಬಳಿ ಅವರ ಬಟ್ಟೆ ಹರಿದು ಕೇಳಿ’ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್‌ನಾಥ್ ಅವರು ರಘುವಂಶಿ ಬೆಂಬಲಿಗರಿಗೆ ಹೇಳುತ್ತಿರುವ ವಿಡಿಯೊ ಈಗ ಬಹಿರಂಗವಾಗಿದೆ.
ಮಧ್ಯಪ್ರದೇಶ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ದಿಗ್ವಿಜಯ್ ಸಿಂಗ್ ಮತ್ತು ಕಮಲ್‌ನಾಥ್ ಮಧ್ಯೆ ಬಿರುಕು ಮೂಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿರುವ ನಡುವೆಯೇ ಶಿವರಾಜ್ ಸಿಂಗ್ ಅವರು ಹೀಗೆ ಹೇಳಿದ್ದಾರೆ.
‘ದಿಗ್ವಿಜಯ್ ಮೇಲೆ ಪ್ರೀತಿ ಇರುವುದರಿಂದ ಅವರಿಗೆ ಪವರ್ ಆಫ್ ಅಟಾರ್ನಿ ನೀಡಿದ್ದೆ ಎಂದು ಕಮಲ್‌ನಾಥ್ ಹೇಳಿದ್ದರು. ಬಯ್ಯಿಸಿಕೊಳ್ಳುವ ವಿಚಾರದಲ್ಲೂ ಅದು ಅನ್ವಯವಾಗಿದೆ. ಹಾಗಾಗಿ ಪವರ್ ಆಫ್ ಅಟಾರ್ನಿ ಈಗಲೂ ಮುಂದುವರೆದಿದೆ’ ಎಂದಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ 2018ರಲ್ಲಿ ಸರ್ಕಾರ ರಚಿಸಿದ್ದ ವೇಳೆ ಆಡಳಿತ ನಡೆಸಲು ದಿಗ್ವಿಜಯ್ ಸಿಂಗ್ ಅವರಿಗೆ ಕಮಲ್‌ನಾಥ್ ಅವರು ಪವರ್ ಆಫ್ ಅಟಾರ್ನಿ ನೀಡಿದ್ದರು.
ಈ ರೀತಿ ಮಾತನಾಡುವ ಕಾಂಗ್ರೆಸ್ ನಾಯಕರು ಅಧಿಕಾರಕ್ಕೇರಿದರೆ ಮಧ್ಯಪ್ರದೇಶದ ಜನತೆಯ ಸ್ಥಿತಿ ಏನಾಗಬಹುದು?. ಅವರನ್ನು ಅಧಿಕಾರಕ್ಕೇರಲು ಜನರು ಬಿಡುವುದಿಲ್ಲಜ್ಯೋತಿರಾದಿತ್ಯ ಸಿಂದಿಯಾ ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.