ಗುವಾಹಟಿ: ಗುವಾಹಟಿಯಲ್ಲಿ ಅಪಹರಣಕ್ಕೊಳಗಾಗಿದ್ದ ಇಬ್ಬರು ಸಹೋದರರನ್ನು ಬಿಹಾರದಲ್ಲಿ ರಕ್ಷಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ನಗರದ ಟೆಟೆಲಿಯಾ ಪ್ರದೇಶದಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದೆ. ಆರೋಪಿಯು ಮಕ್ಕಳಿಗೆ ಚಾಕೊಲೇಟ್ ನೀಡಿ ತನ್ನ ವಾಹನದಲ್ಲಿ ಅಪಹರಿಸಿದ್ದಾನೆ ಎಂದು ಅಧಿಕಾರಿ ಹೇಳಿದ್ದಾರೆ.
ಸಂತ್ರಸ್ತ ತಂದೆಯ ಬಳಿ ಈ ಹಿಂದೆ ಆರೋಪಿಯು ಟ್ರಕ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಯಾವುದೋ ಭಿನ್ನಾಭಿಪ್ರಾಯದ ಕಾರಣದಿಂದಾಗಿ ಈ ಕೃತ್ಯ ಎಸಗಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬಿಹಾರ ಪೊಲೀಸರ ನೆರವಿನಿಂದ ಅಪಹರಣಕ್ಕೊಳಗಾದ ಬಾಲಕರನ್ನು ರಕ್ಷಿಸಲಾಗಿದೆ ಎಂದು ಗುವಾಹಟಿ ಪೊಲೀಸ್ ಆಯುಕ್ತ ದಿಗಂತ ಬರಾಹ್ ಹೇಳಿದ್ದಾರೆ.
ಬಾಲಕರು ಈಗ ವೈಶಾಲಿ ಜಿಲ್ಲೆಯ ಮಹುವಾ ಪೊಲೀಸ್ ಠಾಣೆಯಲ್ಲಿದ್ದಾರೆ. ಅವರನ್ನು ಮನೆಗೆ ಮರಳಿ ಕರೆತರಲು ಗುವಾಹಟಿ ಪೊಲೀಸ್ ತಂಡವು ಈಗಾಗಲೇ ಬಿಹಾರದಲ್ಲಿದೆ. ಅಗತ್ಯ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಬಾಲಕರನ್ನು ಭಾನುವಾರದೊಳಗೆ ಗುವಾಹಟಿಗೆ ಕರೆತರಲಾಗುವುದು ಎಂದು ಬರಾಹ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆರೋಪಿಯು ಪ್ರಸ್ತುತ ತಲೆಮರೆಸಿಕೊಂಡಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.