ADVERTISEMENT

ಸಿದ್ದೀಕಿ ಹತ್ಯೆ ಪ್ರಕರಣ: ಆರೋಪಿ ಮನೆಯಲ್ಲಿದ್ದ ಪಿಸ್ತೂಲ್‌ ವಶ

ಪಿಟಿಐ
Published 25 ಅಕ್ಟೋಬರ್ 2024, 16:39 IST
Last Updated 25 ಅಕ್ಟೋಬರ್ 2024, 16:39 IST

ಮುಂಬೈ: ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಪೈಕಿ ಒಬ್ಬನಾದ ರಾಮ್‌ ಕನೂಜಿಯಾ (43) ಅವರ ಬಾಡಿಗೆ ಮನೆಯಿಂದ ಪೊಲೀಸರು ಪಿಸ್ತೂಲ್‌ ಮತ್ತು ಮೂರು ಬುಲೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.

ಮುಂಬೈ ಹೊರವಲಯದಲ್ಲಿನ ರಾಯಗಢ ಜಿಲ್ಲೆಯ ಪನ್ವೆಲ್‌ ಪಟ್ಟಣದ ಬಾಡಿಗೆ ಮನೆಯಲ್ಲಿ ಕನೂಜಿಯಾ ವರ್ಷದಿಂದ ವಾಸಿಸುತ್ತಿದ್ದ ಎಂದು ಅವರು ತಿಳಿಸಿದ್ದಾರೆ.

ಸಿದ್ದೀಕಿ ಹತ್ಯೆ ಪ್ರಕರಣದಲ್ಲಿ ಕನೂಜಿಯಾ ಶೂಟರ್‌ಗಳಿಗೆ ಬಂದೂಕು ಮತ್ತು ಇತರ ಸಾಮಗ್ರಿಗಳನ್ನು ಪೂರೈಸಿದ ಗುಂಪಿನ ಭಾಗವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರೆಗೆ 14 ಜನರನ್ನು ಬಂಧಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.