ADVERTISEMENT

ಸಿಕ್ಕಿಂ: ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಸಿಎಂ ಪತ್ನಿ ಶಾಸಕತ್ವಕ್ಕೆ ರಾಜೀನಾಮೆ

ಪಿಟಿಐ
Published 13 ಜೂನ್ 2024, 13:43 IST
Last Updated 13 ಜೂನ್ 2024, 13:43 IST
<div class="paragraphs"><p>X/@ChamlingPawan12<br></p></div>
   

X/@ChamlingPawan12

ಗ್ಯಾಂಗ್ಟಕ್: ಸಿಕ್ಕಿಂ ರಾಜ್ಯದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರ ಪತ್ನಿ ಕೃಷ್ಣ ಕುಮಾರಿ ರಾಯ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ನಂತರ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ADVERTISEMENT

ಸಿಎಂ ಪತ್ನಿಯ ಈ ದಿಢೀರ್ ನಿರ್ಧಾರಕ್ಕೆ ಕಾರಣ ತಿಳಿದುಬಂದಿಲ್ಲ.

ಇತ್ತೀಚೆಗೆ ಮುಕ್ತಾಯಗೊಂಡ ಸಿಕ್ಕಿಂ ವಿಧಾನಸಭಾ ಚುನಾವಣೆಯಲ್ಲಿ ನಮ್ಚಿ–ಸಿಂಘಿಥಂಗ್ ಕ್ಷೇತ್ರದಲ್ಲಿ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್‌(ಎಸ್‌ಡಿಎಫ್) ಅಭ್ಯರ್ಥಿ ಬಿಮಲ್ ರಾಯ್ ಅವರನ್ನು ಕೃಷ್ಣ ಕುಮಾರಿ ಮಣಿಸಿದ್ದರು.

ಕೃಷ್ಣ ಕುಮಾರಿ ರಾಜೀನಾಮೆಯನ್ನು ಸ್ಪೀಕರ್ ಎಂ.ಎನ್. ಶೆರ್ಪಾ ಅಂಗೀಕರಿಸಿದ್ದಾರೆ ಎಂದು ಸಿಕ್ಕಿಂ ವಿಧಾನಸಭೆಯ ಕಾರ್ಯದರ್ಶಿ ಲಿಲಿತ್ ಗುರುಂಗ್ ಹೇಳಿದ್ದಾರೆ.

ಸಿಕ್ಕಿಂ ಸಿಎಂ ತಮಾಂಗ್ ಅವರು ಅರುಣಾಚಲಪ್ರದೇಶದ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ತೆರಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.