ADVERTISEMENT

ಸಿಕ್ಕಿಂ: ಮಾಜಿ ಸಂಸದ ಪಹಲ್ವಾನ್‌ ಸುಬ್ಬ ನಿಧನ

ಪಿಟಿಐ
Published 27 ಜೂನ್ 2024, 15:57 IST
Last Updated 27 ಜೂನ್ 2024, 15:57 IST
<div class="paragraphs"><p>ಪಹಲ್ವಾನ್‌ ಸುಬ್ಬ</p></div>

ಪಹಲ್ವಾನ್‌ ಸುಬ್ಬ

   

X ಚಿತ್ರ:  @IndraHangSubba1

ಗ್ಯಾಂಗ್ಟಕ್‌: ಸಿಕ್ಕಿಂನ ಮಾಜಿ ಸಂಸದ ಪಹಲ್ವಾನ್‌ ಸುಬ್ಬ(92) ಅವರು ಗುರುವಾರ ಗ್ಯಾಂಗ್ಟಕ್‌ ಬಳಿಯ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಅವರ ಕುಟುಂಬಸ್ಥರು ತಿಳಿಸಿದ್ದಾರೆ. ದೀರ್ಘಕಾಲಿಕ ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು. 

ADVERTISEMENT

ಸಿಕ್ಕಿಂ ಜನತಾ ಪಕ್ಷದಿಂದ ಟಿಕೆಟ್ ಪಡೆದಿದ್ದ ಅವರು 1980ರ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದಿದ್ದರು. ಅವರು 1984ರವರೆಗೆ ಸಂಸದರಾಗಿದ್ದರು. ಅವರು ಸಿಕ್ಕಿಂ ಚುನಾವಣೆಯಲ್ಲಿ ಆಯ್ಕೆಯಾದ ಮೊದಲ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅದಕ್ಕೂ ಮೊದಲು ಸಿಕ್ಕಿಂ ಕ್ಷೇತ್ರದಲ್ಲಿ ಸಂಸದರ ಆಯ್ಕೆ ಅವಿರೋಧವಾಗಿ ಆಗಿತ್ತು. 

ಸುಬ್ಬ ಅವರ ಅಂತ್ಯಕ್ರಿಯೆ ಸೊರೆಂಗ್ ಜಿಲ್ಲೆಯ ಟಿಂಬರ್‌ಬಂಗ್‌ ಗ್ರಾಮದಲ್ಲಿ ಶುಕ್ರವಾರ ನಡೆಯಲಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.