ADVERTISEMENT

6ನೇ ಸೋಲು: ರಾಜಕೀಯ ನಿವೃತ್ತಿ ಘೋಷಿಸಿದ ಫುಟ್‌ಬಾಲ್ ದಿಗ್ಗಜ ಬೈಚುಂಗ್ ಭುಟಿಯಾ

ಪಿಟಿಐ
Published 25 ಜೂನ್ 2024, 15:45 IST
Last Updated 25 ಜೂನ್ 2024, 15:45 IST
<div class="paragraphs"><p>ಬೈಚುಂಗ್ ಭುಟಿಯಾ</p></div>

ಬೈಚುಂಗ್ ಭುಟಿಯಾ

   

ಗ್ಯಾಂಗ್ಟಕ್: ಇತ್ತೀಚೆಗೆ ನಡೆದ ಸಿಕ್ಕಿಂ ವಿಧಾನಸಭೆ ಚುನಾವಣೆಯಲ್ಲಿ ಎದುರಾದ ಸೋಲಿನ ಬೆನ್ನಲ್ಲೇ ಫುಟ್‌ಬಾಲ್ ದಿಗ್ಗಜ ಬೈಚುಂಗ್ ಭುಟಿಯಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್) ಉಪಾಧ್ಯಕ್ಷರಾಗಿದ್ದ ಭುಟಿಯಾ ಅವರು ಬರ್ಫುಂಗ್ ಕ್ಷೇತ್ರದಲ್ಲಿ ಎಸ್‌ಕೆಎಂ ಪಕ್ಷದ ದೋರ್ಜಿ ವಿರುದ್ಧ ಪರಾಭವಗೊಂಡಿದ್ದರು.

ADVERTISEMENT

ಇದು ಚುನಾವಣಾ ರಂಗದಲ್ಲಿ ಭುಟಿಯಾಗೆ ಎದುರಾದ ಆರನೇ ಸೋಲು ಆಗಿದೆ.

2014ರಲ್ಲಿ ಭುಟಿಯಾ ರಾಜಕೀಯ ಪ್ರವೇಶ ಮಾಡಿದ್ದರು. ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರ ದಾರ್ಜಿಲಿಂಗ್‌ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಭುಟಿಯಾ ಅವರನ್ನು ಕಣಕ್ಕಿಳಿಸಿತ್ತು. 2018ರಲ್ಲಿ 'ಹಮ್ರೋ ಸಿಕ್ಕಿಂ' ಪಕ್ಷ ಸ್ಥಾಪಿಸಿ ರಾಜ್ಯ ರಾಜಕೀಯಕ್ಕೆ ಧುಮುಕಿದ್ದರು. ಕಳೆದ ವರ್ಷ ಪವನ್ ಚಾಮ್ಲಿಂಗ್ ನೇತೃತ್ವದ ಎಸ್‌ಡಿಎಫ್ ಪಕ್ಷದೊಂದಿಗೆ ತಮ್ಮ ಪಕ್ಷವನ್ನು ವಿಲೀನಗೊಳಿಸಿದ್ದರು.

'2024ರ ಫಲಿತಾಂಶದ ಬಳಿಕ ರಾಜಕೀಯ ನನಗೆ ಸೇರಿದ್ದಲ್ಲ ಎಂಬುದನ್ನು ಮನಗಂಡಿದ್ದೇನೆ. ಆದ್ದರಿಂದ ರಾಜಕೀಯ ತೊರೆಯುತ್ತಿದ್ದೇನೆ' ಎಂದು ಭುಟಿಯಾ ತಿಳಿಸಿದ್ದಾರೆ.

'ಒಂದು ವೇಳೆ ಜನಾದೇಶ ಸಿಕ್ಕಿದ್ದರೆ ಸಿಕ್ಕಿಂ ಪುಟ್‌ಬಾಲ್ ಸೇರಿದಂತೆ ಸಮಗ್ರ ಕ್ರೀಡೆ ಹಾಗೂ ಪ್ರವಾಸೋದ್ಯಮ ಪ್ರಗತಿಗಾಗಿ ಅತ್ಯುತ್ತಮ ಕೊಡುಗೆಯನ್ನು ನೀಡುತ್ತಿದ್ದೆ' ಎಂದು ಅವರು ಹೇಳಿದ್ದಾರೆ.

ಆರು ಸಲ ಭುಟಿಯಾಗೆ ಎದುರಾದ ಸೋಲು:

*2014ರಲ್ಲಿ ಪ.ಬಂಗಾಳದ ದಾರ್ಜಲಿಂಗ್ ಲೋಕಸಭಾ ಕ್ಷೇತ್ರದಲ್ಲಿ ಸೋಲು

*2016ರಲ್ಲಿ ಪ.ಬಂಗಾಳದ ಸಿಲ್‌ಗುರಿ ವಿಧಾನಸಭಾ ಕ್ಷೇತ್ರದಿಂದ ಸೋಲು

*2019ರಲ್ಲಿ ಸಿಕ್ಕಿಂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಸೋಲು

*2020ರಲ್ಲಿ ಗ್ಯಾಂಗ್ಟಕ್ ಉಪಚುನಾವಣೆಯಲ್ಲಿ ಸೋಲು

*2024ರ ಸಿಕ್ಕಿಂ ವಿಧಾನಸಭೆ ಚುನಾವಣೆಯಲ್ಲಿ 4,346 ಮತಗಳ ಅಂತರದ ಸೋಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.