ADVERTISEMENT

ಅಯ್ಯಪ್ಪ ಭಕ್ತರ ಪ್ರಚೋದಿಸಬೇಡಿ: ಗಾಯಕ ಕೆ.ಜೆ.ಯೇಸುದಾಸ್‌

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 6:01 IST
Last Updated 16 ಡಿಸೆಂಬರ್ 2019, 6:01 IST
ಕೆ.ಜೆ.ಯೇಸುದಾಸ್‌
ಕೆ.ಜೆ.ಯೇಸುದಾಸ್‌   

ಚೆನ್ನೈ: ‘ಮಹಿಳೆಯರ ಉಪಸ್ಥಿತಿಯಿಂದ ಪುರುಷ ಭಕ್ತರ ಮನಸ್ಸಿಗೆ ಭಂಗವಾಗಲಿದೆ ಎಂದಾದರೆ, ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡದಿರುವುದೇ ಉತ್ತಮ’ ಎಂದು ಹೆಸರಾಂತ ಗಾಯಕ ಕೆ.ಜೆ.ಯೇಸುದಾಸ್‌ ಅವರುಪ್ರತಿಪಾದಿಸಿದ್ದಾರೆ.

ಸ್ವತಃ ಅಯ್ಯಪ್ಪನ ಭಕ್ತರೂ ಆದ ಯೇಸುದಾಸ್‌ ಸುದ್ದಿಗಾರರ ಜೊತೆಗೆ ಮಾತನಾಡುತ್ತಾ ಈ ಮಾತು ಹೇಳಿದರು. ನಿತ್ಯ, ದೇಗುಲದ ಬಾಗಿಲು ಮುಚ್ಚುವ ಸಂದರ್ಭದಲ್ಲಿ ಇವರು ಹಾಡಿರುವ ‘ಹರಿವರಾಸನಂ..’ ಕೀರ್ತನೆಯೇ ಧ್ವನಿವರ್ಧಕದಲ್ಲಿ ಹೊಮ್ಮಲಿದೆ.

‘ಸುಂದರವಾದ ಹುಡುಗಿಯೊಬ್ಬಳು, ಇಂದು ಆಕೆ ಧರಿಸುವ ಉಡುಪಿನಲ್ಲಿ ದೇಗುಲಕ್ಕೆ ತೆರಳಿದರೆ ಸ್ವಾಮಿ ಅಯ್ಯಪ್ಪನೇನೂ ಕಣ್ತೆರೆದು ನೋಡುವುದಿಲ್ಲ. ಆದರೆ, ಇತರೆ ಭಕ್ತರು ನೋಡುತ್ತಾರೆ, ಇದು ಸರಿಯಲ್ಲ. ಇದರಿಂದ ಭಕ್ತರ ಉದ್ದೇಶವೇ ಬದಲಾಗಲಿದೆ’ಎಂದರು.

ADVERTISEMENT

‘ಇದೇ ಕಾರಣದಿಂದ ನೀವು ಬರಬೇಡಿ ಎಂದು ಅವರಿಗೆ (ಮಹಿಳೆಯರಿಗೆ) ನಾವು ಹೇಳುತ್ತಿದ್ದೇವೆ. ಇನ್ನೂ ಸಾಕಷ್ಟು ದೇವಸ್ಥಾನಗಳಿವೆ. ಮಹಿಳೆಯರು ಅಲ್ಲಿಗೆ ಹೋಗಲಿ’ ಎಂದು ಯೇಸುದಾಸ್‌ ಶನಿವಾರ
ಪ್ರತಿಪಾದಿಸಿದರು.

***

ಇನ್ನೂ ಸಾಕಷ್ಟು ದೇವಸ್ಥಾನಗಳಿವೆ. ಅಲ್ಲಿಗೆ ಹೋಗಿ. ಅಯ್ಯಪ್ಪ ಭಕ್ತರನ್ನು ಪ್ರಚೋದಿಸಬೇಡಿ ಎಂಬುದಷ್ಟೇ ಮಹಿಳೆಯರಿಗೆ ನನ್ನ ಮನವಿ

- ಕೆ.ಜೆ.ಯೇಸುದಾಸ್‌,ಗಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.