ADVERTISEMENT

ಮೇಘಾಲಯ | ಸಾರ್ವಜನಿಕವಾಗಿ ಮಹಿಳೆಗೆ ಥಳಿತ: 6 ಮಂದಿ ಬಂಧನ

ಪಿಟಿಐ
Published 27 ಜೂನ್ 2024, 14:11 IST
Last Updated 27 ಜೂನ್ 2024, 14:11 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಶಿಲ್ಲಾಂಗ್‌: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳನ್ನು ಆಕೆಯ ಸಂಬಂಧಿಕರು ಸಾರ್ವಜನಿಕವಾಗಿ ಥಳಿಸಿರುವ ಘಟನೆ ಮೇಘಾಲಯದ ಗಾರೋಹಿಲ್ಸ್‌ ಜಿಲ್ಲೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನೈತಿಕ ಸಂಬಂಧ ಕುರಿತು ವಿಚಾರಣೆಗಾಗಿ ಮಹಿಳೆಯನ್ನು ಹಳ್ಳಿಯಲ್ಲಿರುವ 'ಕಾಂಗರೂ ನ್ಯಾಯಾಲಯ'ದ (ನಿರ್ದಿಷ್ಟ ಹಿತಾಸಕ್ತಿಗಾಗಿ ನಡೆಸುವ ವಿಚಾರಣೆ) ಮುಂದೆ ಹಾಜರಾಗುವಂತೆ ತಿಳಿಸಲಾಗಿತ್ತು. ವಿಚಾರಣೆಗೆ ಬಂದ ಬಳಿಕ ನಾಲ್ಕು ಮಂದಿ ಆಕೆಯ ತಲೆ ಕೂದಲನ್ನು ಹಿಡಿದು ಎಳೆದೊಯ್ದು, ನೆರೆದಿದ್ದ ಜನರ ಗುಂಪಿನ ಎದುರೇ ದೊಣ್ಣೆಗಳಿಂದ ಆಕೆಗೆ ಥಳಿಸಿದ್ದಾರೆ. ಆಕೆಗೆ ಒಂದು ಮಗು ಇದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಇಡೀ ದೃಶ್ಯವನ್ನು ವಿಡಿಯೊದಲ್ಲಿ ಚಿತ್ರೀಕರಿಸಲಾಗಿದ್ದು, ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ವಿಡಿಯೊ ಹರಿದಾಡಿದ ಕೆಲವೇ ಗಂಟೆಗಳಲ್ಲಿ ಆರು ಮಂದಿಯನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ಗ್ರಾಮದಲ್ಲಿಯೇ ಬಂಧಿಸಿ ಕರೆತಂದರು. ಬಳಿಕ, ಉಳಿದವರು ಶರಣಾಗಿದ್ದಾರೆ. ಎಲ್ಲರನ್ನು ಜಿಲ್ಲಾ ಕೇಂದ್ರಕ್ಕೆ ಕರೆತರಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಅಬ್ರಹಾಂ ಟಿ. ಸಂಗ್ಮಾ ತಿಳಿಸಿದ್ದಾರೆ.

ಈ ಘಟನೆಯನ್ನು ರಾಜ್ಯ ಮಹಿಳಾ ಆಯೋಗವೂ ಸ್ವಯಂಪ್ರೇರಿತವಾಗಿ ಸ್ವೀಕರಿಸಿದೆ ಮತ್ತು ಸಂತ್ರಸ್ತೆಯನ್ನು ಭೇಟಿ ಮಾಡಲು ತಂಡವನ್ನು ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.