ADVERTISEMENT

ಉತ್ತರ ಪ್ರದೇಶ | ಎಸ್‌ಪಿ ಮುಖಂಡನ ನಿವಾಸದ ಮೇಲೆ ಗುಂಡಿನ ದಾಳಿ

ಪಿಟಿಐ
Published 1 ಜುಲೈ 2024, 12:21 IST
Last Updated 1 ಜುಲೈ 2024, 12:21 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸಮಾಜವಾದಿ ಪಕ್ಷದ ಮುಖಂಡನ ನಿವಾಸದ ಮೇಲೆ ಗುಂಡಿನ ದಾಳಿ ನಡೆದಿದ್ದು, ಬಾಲಕ ಸೇರಿ ಆರು ಜನರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ದಶಾಶ್ವಮೇಧ ಪ್ರದೇಶದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಮಾಜಿ ಕಾರ್ಪೋರೇಟರ್‌ ವಿಜಯ್‌ ಯಾದವ್‌ ದೂರು ನೀಡಿದ್ದಾರೆ. ದಾಳಿಕೋರರು ತಮ್ಮ ಕುಟುಂಬದವರೆಲ್ಲರನ್ನೂ ಹತ್ಯೆ ಮಾಡುವ ಉದ್ದೇಶ ಹೊಂದಿದ್ದಾಗಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರಿನ ಅನ್ವಯ ಅಂಕಿತ್‌ ಯಾದವ್‌, ಶೋಭಿತ್‌ ವರ್ಮಾ, ಗೋವಿಂದ್‌ ಯಾದವ್‌, ಸಾಹಿಲ್‌ ಯಾದವ್‌ ಹಾಗೂ ಇತರರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ದಾಳಿಯಲ್ಲಿ ಗಾಯಗೊಂಡಿದ್ದ ನಿರ್ಭಯ್‌ ಯಾದವ್‌(6), ಕಿರಣ್‌ ಯಾದವ್‌, ಉಮೇಶ್‌ ಯಾದವ್‌, ದಿನೇಶ್‌ ಯಾದವ್‌ ಹಾಗೂ ಶುಭಂ ಅಲಿಯಾಸ್‌ ಗೋಲು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ದಶಾಶ್ವಮೇಧ ಪೊಲೀಸ್‌ ಠಾಣಾಧಿಕಾರಿ ರಾಕೇಶ್‌ ಪಾಲ್‌ ಅವರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್‌ ಆಯುಕ್ತ ಮೋಹಿತ್‌ ಅಗರ್‌ವಾಲ್‌ ತಿಳಿಸಿದ್ದಾರೆ.

ದಾಳಿಕೋರರನ್ನು ಬಂಧಿಸಲು ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಉತ್ತರ ಪ್ರದೇಶ ಗ್ಯಾಂಗ್‌ಸ್ಟರ್ಸ್‌ ಮತ್ತು ಸಮಾಜ ವಿರೋಧಿ ಚಟುವಟಿಕೆಗಳ ತಡೆ ಕಾಯ್ದೆ ಹಾಗೂ ರಾಷ್ಟ್ರೀಯ ಭದ್ರತಾ ಕಾಯ್ದೆಯ ಪ್ರಕಾರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಪ್ರಮೋದ್‌ ಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.