ADVERTISEMENT

ದೆಹಲಿಯಲ್ಲಿ ಸಿಲಿಂಡರ್ ಸ್ಫೋಟ: ಒಂದೇ ಕುಟುಂಬದ 6 ಮಂದಿ ಸಾವು

ನವದೆಹಲಿಯ ಬಿಜ್ವಾಸನ್ ಪ್ರದೇಶದ ವಾಲ್ಮೀಕಿ ಕಾಲೊನಿಯಲ್ಲಿ ನಡೆದ ಘಟನೆ

ಪಿಟಿಐ
Published 29 ಏಪ್ರಿಲ್ 2021, 9:44 IST
Last Updated 29 ಏಪ್ರಿಲ್ 2021, 9:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೆಹಲಿಯ ಬಿಜ್ವಾಸನ್ ಪ್ರದೇಶದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ.

ಬಿಜ್ವಾಸನ್ ಪ್ರದೇಶದ ವಾಲ್ಮೀಕಿ ಕಾಲೊನಿಯ ವಿದ್ಯುತ್‌ ಪರಿವರ್ತಕದಲ್ಲಿ(ಟ್ರಾನ್ಸ್‌ಫಾರ್ಮರ್‌ನಲ್ಲಿ) ಮುಂಜಾನೆ ಬೆಂಕಿ ಕಾಣಿಸಿಕೊಂಡಿತು. ಆ ಬೆಂಕಿಯ ಜ್ವಾಲೆಗಳು ಸಮೀಪದಲ್ಲಿದ್ದ ಎರಡು ಗುಡಿಸಿಲುಗಳಿಗೂ ವ್ಯಾಪಿಸಿತು. ಪರಿಣಾಮ, ಅಲ್ಲಿದ್ದ ಎಲ್‌ಪಿಜಿ ಸಿಲಿಂಡರ್‌ ಸ್ಫೋಟಗೊಂಡು ನಾಲ್ವರು ಮಕ್ಕಳು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ.

ಕಮಲೇಶ್ (37), ಪತ್ನಿ ಬುಧಾನಿ (32), 16 ಮತ್ತು 12ವರ್ಷದ ಇಬ್ಬರು ಪುತ್ರಿಯರು ಮತ್ತು 6 ವರ್ಷ ಹಾಗೂ 3 ತಿಂಗಳ ವಯಸ್ಸಿನ ಇಬ್ಬರು ಪುತ್ರರು ಮೃತಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ಅಧಿಕಾರಿಗಳ ಪ್ರಕಾರ, ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಆ ಬೆಂಕಿಯ ಜ್ವಾಲೆಗಳು ಹತ್ತಿರದ ಎರಡು ಗುಡಿಸಲುಗಳಿಗೆ ವೇಗವಾಗಿ ಹರಡಿದೆ. ಇದು ಅಡುಗೆ ಅನಿಲ ತುಂಬಿದ್ದ ಸಿಲಿಂಡರ್‌ ಸ್ಫೋಟಕ್ಕೆ ಕಾರಣವಾಗಿದೆ.

ರಾತ್ರಿ 12.30ರಲ್ಲಿ ವಾಲ್ಮೀಕಿ ಕಾಲೊನಿಯಲ್ಲಿ ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ ಹೊತ್ತಿಕೊಂಡಿರುವುದಾಗಿ ನಮಗೆ ಕರೆ ಬಂತು. ತಕ್ಷಣ ನಾವು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಿದೆವು ಎಂದು ಅಧಿಕಾರಿಗಳು ತಿಳಿಸಿದರು.

ಅಗ್ನಿಶಾಮಕ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಮೃತರ ಶವಗಳನ್ನು ಸಫ್ದರ್ಜಂಗ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.