ಅಗರ್ತಲಾ: ನಿಷೇಧಿತ ಉಗ್ರಗಾಮಿ ಸಂಘಟನೆ ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರಾದ(ಎನ್‌ಎಲ್‌ಎಫ್‌ಟಿ) 6 ಉಗ್ರಗಾಮಿಗಳು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ಜೊತೆ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಡೋ–ಬಾಂಗ್ಲಾ ಗಡಿಯಲ್ಲಿ ಸಕ್ರಿಯವಾಗಿದ್ದ ಉಗ್ರರು, ಬಾಂಗ್ಲಾದೇಶದ ತಮ್ಮ ಅಡಗುದಾಣವನ್ನು ಇತ್ತೀಚೆಗೆ ತೊರೆದು ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಗುಪ್ತಚರ ವಿಭಾಗದ ಡಿಐಜಿ ಕೃಷ್ಣೇಂದು ಚಕ್ರವರ್ತಿ ತಿಳಿಸಿದ್ದಾರೆ.
ಎರಡು ರೈಫಲ್, ಎರಡು ಗ್ರೆನೇಡ್, ಒಂದು ನಾಡ ಬಂದೂಕು, 6 ಜೀವಂತ ಬುಲೆಟ್‌ಗಳನ್ನು ಶರಣಾಗತಿ ವೇಳೆ ಒಪ್ಪಿಸಿದ್ದಾರೆ.
‘ಶುಕ್ರವಾರ ಶರಣಾದ ಉಗ್ರರು 2017ರಲ್ಲಿ ಸಂಘಟನೆ ಸೇರಿದ್ದರು. ಬಾಂಗ್ಲಾದೇಶಕ್ಕೆ ಅವರನ್ನು ತರಬೇತಿಗೆ ಕರೆದೊಯ್ಯಲಾಗಿತ್ತು. ಪೊಲೀಸರ ಸಂಘಟಿತ ಪ್ರಯತ್ನದ ಫಲವಾಗಿ ಉಗ್ರರು ಶರಣಾಗಿದ್ದಾರೆ’ಎಂದು ಪೊಲೀಸರು ಹೇಳಿದ್ದಾರೆ.
2022ರಿಂದ ಈವರೆಗೆ 36 ಮಂದಿ ಸಕ್ರಿಯ ಎನ್‌ಎಲ್‌ಎಫ್‌ಟಿ ಭಯೋತ್ಪಾದಕರು ಭದ್ರತಾ ಪಡೆಗಳಿಗೆ ಶರಣಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.