ನವದೆಹಲಿ: ಹೈದರಾಬಾದ್‌ನ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅವರು ಮಂಗಳವಾರ ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ನಾಟಕೀಯ ಪ್ರಸಂಗವೊಂದು ನಡೆದಿದೆ.
ಪ್ರಮಾಣ ವಚನ ಸ್ವೀಕರಿಸಲು ಓವೈಸಿ ಅವರು ಸಂಸತ್‌ನಲ್ಲಿಸ್ಪೀಕರ್ ಅವರ ಮುಂದಿನ ಬಾವಿಯ ಬಳಿಗೆ ನಡೆದು ಬರುತ್ತಿದ್ದ ವೇಳೆ, ಆಡಳಿತ ಪಕ್ಷದ ಸಂಸದರು ‘ಭಾರತ್ ಮಾತಾ ಕೀ ಜೈ,’ ‘ವಂದೇ ಮಾತರಂ,’ ಎಂದು ಕೂಗಿದರು. ಆಗ ಓವೈಸಿ ‘ಕೂಗಿರಿ... ಕೂಗಿರಿ..’ ಎಂದು ಹೇಳುತ್ತಲೇ ಮೈಕ್ ಬಳಿಗೆ ಬಂದರು. ನಂತರ ಅವರು ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣ ವಚನ ಪೂರ್ಣಗೊಳಿಸಿದ ಒವೈಸಿ ಅವರು ಕೊನೆಯಲ್ಲಿ ‘ಜೈ ಭೀಮ್... ಜೈ ಭೀಮ್,ತಕ್ಬೀರ್, ಅಲ್ಲಾ ಹು ಅಕ್ಬರ್, ಜೈ ಹಿಂದ್,’ ಎಂದು ಘೋಷಣೆ ಕೂಗಿಹಿಂದಿರುಗಿದರು. ಓವೈಸಿ ಅವರ ಈ ಘೋಷಣೆಯನ್ನೂ ಕೆಲ ಸಂಸದರು ಅಣಕಿಸಿದರು. ‘ಓ...,’ ಎಂದು ಕೂಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.