ADVERTISEMENT

ದೀಪಿಕಾ ಪಡುಕೋಣೆಯ ರಾಜಕೀಯ ಒಲವು ಗೊತ್ತಿದೆ: ಸ್ಮೃತಿ ಇರಾನಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 11:05 IST
Last Updated 10 ಜನವರಿ 2020, 11:05 IST
ಸ್ಮೃತಿ ಇರಾನಿ
ಸ್ಮೃತಿ ಇರಾನಿ   

ಚೆನ್ನೈ:ದೀಪಿಕಾ ಪಡುಕೋಣೆ 2011ರಲ್ಲಿ ಆಕೆಯ ರಾಜಕೀಯ ಒಲವಿನ ಬಗ್ಗೆ ಹೇಳಿದ್ದಳು. ಆಕೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾಳೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ಗುರುವಾರ ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಮೃತಿ ಇರಾನಿ, ತಾವು ಯಾರ ಪರ ನಿಲ್ಲುತ್ತಿದ್ದೇವೆ ಎಂಬುದು ಸುದ್ದಿಗಳನ್ನು ತಿಳಿದುಕೊಂಡಿರುವವರಿಗೆ ಗೊತ್ತಿರುತ್ತದೆ. ಸಿಆರ್‌ಪಿಎಫ್ ಯೋಧರು ಹುತಾತ್ಮರಾದಾಗ ಸಂಭ್ರಮಿಸಿದವರೊಂದಿಗೆ ನೀವು ನಿಲ್ಲುತ್ತಿದ್ದೀರಿ ಎಂಬುದು ನಿಮಗೆ ಗೊತ್ತಿರಬೇಕು ಎಂದು ದೀಪಿಕಾಳಜೆಎನ್‌ಯುಭೇಟಿಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಆಕೆಯ ರಾಜಕೀಯ ಒಲವು ಬಗ್ಗೆ ಈ ಹಿಂದೆಯೇ ಗೊತ್ತಿತ್ತು. ಇತರ ಹೆಣ್ಣುಮಕ್ಕಳ ಮೇಲೆ ಹಲ್ಲೆ ನಡೆಸುವ ಜನರ ಜತೆ ನಿಲ್ಲುವ ಆಕೆಯಸ್ವಾತಂತ್ರ್ಯವನ್ನು ನಾನು ನಿರಾಕರಿಸುವುದಿಲ್ಲ. ಅದು ಆಕೆಯ ಸ್ವಾತಂತ್ರ್ಯ.
ಆಕೆ 2011ರಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿ ತಮ್ಮ ರಾಜಕೀಯ ನಿಲುವನ್ನು ವ್ಯಕ್ತಪಡಿಸಿದ್ದರು. ಭಾರತ್ ತೇರೇ ಟುಕ್ಡೇ ಹೋಂಗೇ ( ಭಾರತವನ್ನು ತುಂಡು ಮಾಡುತ್ತೇವೆ) ಎಂದು ಹೇಳಿದ ಜನರ ಜತೆ ನಿಂತುಕೊಳ್ಳುವುದು ಆಕೆಯ ಸ್ವಾತಂತ್ರ್ಯ ಎಂದಿದ್ದಾರೆ ಸ್ಮೃತಿ ಇರಾನಿ.

ADVERTISEMENT

ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ಬಯಸುತ್ತೇನೆ ಎಂಬುದಾಗಿ ದೀಪಿಕಾ ಪಡುಕೋಣೆ ಸಂದರ್ಶನವೊಂದರಲ್ಲಿ ಹೇಳಿದ್ದರು. ದೀಪಿಕಾ ಜೆಎನ್‌ಯುಗೆ ಭೇಟಿ ನೀಡಿದ ಬೆನ್ನಲ್ಲೇ ಆಕೆಯಹಳೇ ಸಂದರ್ಶನವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.