ADVERTISEMENT

ಮೋದಿ ನಿವೃತ್ತಿ ಹೊಂದಿದ ದಿನವೇ ರಾಜಕೀಯದಿಂದ ದೂರ ಸರಿಯುವೆ: ಸ್ಮೃತಿ ಇರಾನಿ 

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 5:14 IST
Last Updated 4 ಫೆಬ್ರುವರಿ 2019, 5:14 IST
ಸ್ಮೃತಿ ಇರಾನಿ (ಕೃಪೆ: ಎಎನ್‍ಐ)
ಸ್ಮೃತಿ ಇರಾನಿ (ಕೃಪೆ: ಎಎನ್‍ಐ)   

ಪುಣೆ: ಪ್ರಧಾನ್ ಸೇವಕ್ ಆಗುವ ಯಾವುದೇ ಗುರಿಯನ್ನು ನಾನು ಹೊಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ನಿವೃತ್ತಿ ಹೊಂದಿದ ದಿನವೇ ತಾನು ರಾಜಕೀಯದಿಂದ ದೂರ ಸರಿಯುತ್ತೇನೆ ಎಂದು ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ಪುಣೆಯಲ್ಲಿ ನಡೆದ ವರ್ಡ್ಸ್ ಕೌಂಟ್ ಫೆಸ್ಟಿವಲ್‍ನಲ್ಲಿ ಭಾನುವಾರ ಭಾಗವಹಿಸಿದ ಸ್ಮತಿ ಅವರು, ವರ್ಚಸ್ಸು ಹೊಂದಿರುವ ನಾಯಕರೊಂದಿಗೆ ಕೆಲಸ ಮಾಡುವುದಕ್ಕಾಗಿ ನಾನು ರಾಜಕೀಯಕ್ಕೆ ಬಂದೆ. ದಿವಂಗತ ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೆಲಸ ಮಾಡಲು ಸಾಧ್ಯವಾಗಿದ್ದಕ್ಕೆ ನಾನು ತುಂಬಾ ಅದೃಷ್ಟವಂತೆ ಎಂದು ಹೇಳಿದ್ದಾರೆ.

ನಿಮ್ಮನ್ನು ಪ್ರಧಾನ ಸೇವಕ್ ಆಗಿ ಯಾವಾಗ ನೋಡಬಹುದು? ಎಂಬ ಪ್ರಶ್ನೆಗೆ 'ಎಂದಿಗೂ ಇಲ್ಲ' ಎಂದು ಉತ್ತರಿಸಿದ್ದಾರೆ ಸ್ಮೃತಿ ಇರಾನಿ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.