ADVERTISEMENT

ಕಾಶ್ಮೀರದ ಎತ್ತರದ ಪ್ರದೇಶಗಳಲ್ಲಿ ಹಿಮಪಾತ

ಪಿಟಿಐ
Published 22 ಜನವರಿ 2023, 11:11 IST
Last Updated 22 ಜನವರಿ 2023, 11:11 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಶ್ರೀನಗರ: ಪಹಲ್ಗಾಮ್‌ ಹೊರತುಪಡಿಸಿ ಕಾಶ್ಮೀರದ ಕೆಲವು ಎತ್ತರದ ಪ್ರದೇಶಗಳಲ್ಲಿ ಹಿಮಪಾತವಾಗುತ್ತಿದ್ದು, ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಹವಾಮಾನ ಇಲಾಖೆಯು ಸೋಮವಾರದಿಂದ ಮೂರು ದಿನಗಳಲ್ಲಿ ತೀವ್ರತೆಯ ಆರ್ದ್ರ ವಾತಾವರಣ ಇರುವ ಮುನ್ಸೂಚನೆ ನೀಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಗುಲ್‌ಮಾರ್ಗ್‌ನ ಜನಪ್ರಿಯ ಸ್ಕಿ ರೆಸಾರ್ಟ್‌ ಬಳಿಯೂ ಲಘು ಅಥವಾ ಮಧ್ಯಮ ಪ್ರಮಾಣದ ಹಿಮಪಾತವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮುವಿನಲ್ಲಿ ಸೋಮವಾರದಿಂದ ಬುಧವಾರದವರೆಗೆ ಹೆಚ್ಚಿನ ಮಳೆ ಮತ್ತು ಮಧ್ಯಮ ಹಿಮ ಬೀಳಲಿದ್ದು, ಗುರುವಾರ ಮತ್ತು ಶುಕ್ರವಾರ ಲಘು ಮಳೆ ಅಥವಾ ಹಿಮ ಬೀಳಬಹುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಗರದಲ್ಲಿ ತಾಪಮಾನ 1 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ರಾತ್ರಿ ಮೈನಸ್‌ 0.2ಕ್ಕೆ ಇಳಿದಿದೆ. ಅದೇ ರೀತಿ ಖಾಜಿಗುಂಡ್‌ ಪ್ರದೇಶದಲ್ಲಿಯೂ ಕನಿಷ್ಠ 0.2 ಡಿಗ್ರಿ ತಾಪಮಾನ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.