ಎತ್ತರದ ಹಿಮ ಪರ್ವತಗಳಲ್ಲಿ ಯೋಧರು ರಕ್ತ ಹೆಪ್ಪುಗಟ್ಟುವ ಚಳಿಯಲ್ಲಿ ದೇಶದ ಗಡಿ ಕಾಯುತ್ತಿರುತ್ತಾರೆ. ಹಾಗಾಗಿ, ಯೋಧರನ್ನು ಬೆಚ್ಚಗಿಡುವ ಉದ್ದೇಶದಿಂದ ಶಿಕ್ಷಣ ಸುಧಾರಕರಾಗಿ ಬದಲಾಗಿರುವ ಇಂಜಿನಿಯರ್ ಕಮ್ ಅನ್ವೇಷಕ ಸೋನಮ್ ವಾಂಚುಕ್ ಎನ್ನುವವರು ಸೈನಿಕರಿಗಾಗಿ ಸೋಲಾರ್ ಹೀಟೆಡ್ ಟೆಂಟ್ ಆವಿಷ್ಕರಿಸಿದ್ದಾರೆ. ಬೆಳಕಿನ ಹೊತ್ತಿನಲ್ಲಿ ಟೆಂಟ್‌ನಲ್ಲಿರುವ ಉಪಕರಣ ಶಾಖ ಹಿಡಿದಿಟ್ಟುಕೊಂಡು ರಾತ್ರಿ ಹೊತ್ತಲ್ಲಿ ಟೆಂಟ್ ಬಿಸಿಯಾಗಿಸುತ್ತವೆ. ಈ ಮೂಲಕ ಸೈನಿಕರನ್ನು ಬೆಚ್ಚಗಿಡುತ್ತದೆ. ಈ ಟೆಂಟ್ ವಿಶೇಷತೆಗಳ ಬಗ್ಗೆ ಮತ್ತಷ್ಟು ತಿಳಿಯಲು ವಿಡಿಯೊ ನೋಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.