ADVERTISEMENT

‘ಭಾರತದ ಪ್ರಗತಿಯನ್ನು ಸಹಿಸದ ಕೆಲವು ದೇಶಗಳಿಂದ ಸಮಾಜ ವಿಭಜಿಸುವ ಯತ್ನ; ಮೋಹನ್ ಭಾಗವತ್

ಪಿಟಿಐ
Published 21 ಜೂನ್ 2023, 17:18 IST
Last Updated 21 ಜೂನ್ 2023, 17:18 IST
   

ನಾಗ್ಪುರ (ಪಿಟಿಐ): ‘ಭಾರತದ ಪ್ರಗತಿಯನ್ನು ಸಹಿಸದ ಕೆಲವು ದೇಶಗಳು; ರಾಷ್ಟ್ರದೊಳಗಿನ ಸಮಾಜವನ್ನು ವಿಭಜಿಸುವ ಪ್ರಯತ್ನ ನಡೆಸಿವೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದರು.

ಇಲ್ಲಿನ ಜಗನ್ನಾಥ ದೇಗುಲಕ್ಕೆ ಮಂಗಳವಾರ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು ‘ರಾಕ್ಷಸಿ ಶಕ್ತಿಗಳು ಭಾರತದ ಪ್ರಗತಿಯನ್ನು ವಿರೋಧಿಸುತ್ತಿವೆ. ದೇಶದೊಳಗೆ ಆಂತರಿಕ ದ್ವೇಷವನ್ನು ಪ್ರಚೋದಿಸಿ ಸಮಸ್ಯೆಯನ್ನು ಸೃಷ್ಟಿಸಲು ಯತ್ನಿಸುತ್ತಿವೆ’ ಎಂದರು.

‘ನಾವು ಒಂದಾಗಿ ಇರೋವರೆಗೂ ಯಾವ ಶಕ್ತಿಯಿಂದಲೂ ಮಣಿಸಲು ಸಾಧ್ಯವಿಲ್ಲ. ಆದ್ದರಿಂದಲೇ ನಮ್ಮನ್ನು ವಿಭಜಿಸುವ ಪ್ರಯತ್ನ ನಡೆದಿದೆ. ನಾವೆಲ್ಲರೂ ಪರಸ್ಪರ ಸಾಮರಸ್ಯದಿಂದ ಬದುಕಬೇಕಿದೆ’ ಎಂದು ಭಾಗವತ್ ಒತ್ತಿ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.