ADVERTISEMENT

ನಾಗಾಂವ್‌ನ ಎರಡು ಜೈಲಿನ 85 ಕೈದಿಗಳಿಗೆ ಎಚ್‌ಐವಿ ಸೋಂಕು ದೃಢ

ಪಿಟಿಐ
Published 9 ಅಕ್ಟೋಬರ್ 2021, 9:46 IST
Last Updated 9 ಅಕ್ಟೋಬರ್ 2021, 9:46 IST
.
.   

ನಾಗಾಂವ್ (ಅಸ್ಸಾಂ): ಇಲ್ಲಿನ ಕೇಂದ್ರ ಕಾರಾಗೃಹ ಮತ್ತು ವಿಶೇಷ ಕಾರಾಗೃಹದ 85 ಕೈದಿಗಳಲ್ಲಿ ಎಚ್‌ಐವಿ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದರಲ್ಲಿ ಕೇಂದ್ರ ಕಾರಾಗೃಹದ 40 ಮತ್ತು ವಿಶೇಷ ಕಾರಾಗೃಹದ 45 ಕೈದಿಗಳು ಸೇರಿದ್ದಾರೆ ಎಂದು ನಾಗಾಂವ್‌ನ ಬಿ.ಪಿ ಸಿವಿಲ್‌ ಆಸ್ಪತ್ರೆಯ ಮೇಲ್ವಿಚಾರಕರಾದ ಡಾ. ಎಲ್‌.ಸಿ.ನಾಥ್‌ ಮಾಹಿತಿ ನೀಡಿದ್ದಾರೆ.

ಈ ಎಲ್ಲ ಸೋಂಕಿತರು ಮಾದಕ ವ್ಯಸನಿಗಳಾಗಿದ್ದಾರೆ. ಅವರು ನಿಷೇಧಿತ ಔಷಧಿಗಳನ್ನು ಒಂದೇ ಸಿರಿಂಜ್‌ನಿಂದ ಇಂಜೆಕ್ಟ್‌ ಮಾಡಿಕೊಳ್ಳಲು ಬಯಸುತ್ತಾರೆ. ಇದರಿಂದಾಗಿ ಅವರಲ್ಲಿ ಎಚ್‌ಐವಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ADVERTISEMENT

ಸಿವಿಲ್‌ ಆಸ್ಪತ್ರೆಯ ಮೇಲ್ವಿಚಾರಕರು ನೀಡಿದ ಮಾಹಿತಿಯನ್ನು ಕೇಂದ್ರೀಯ ಮತ್ತು ವಿಶೇಷ ಕಾರಾಗೃಹದ ಅಧಿಕಾರಿಗಳು ದೃಢಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.