ಮುಂಬೈ: 'ದೆಹಲಿಯಲ್ಲಿರುವ ಕೆಲವರು ಯುಪಿಎ-II ರಚಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಬಿಜೆಪಿ ವಿರುದ್ಧ ಹೋರಾಟ ನಡೆಸಲು ಈಗ ಅಸ್ತಿತ್ವದಲ್ಲಿರುವ ಯುಪಿಎ ಮೈತ್ರಿಕೂಟವನ್ನು ಬಲಪಡಿಸುವ ಅಗತ್ಯವಿದೆ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಶುಕ್ರವಾರ ಹೇಳಿದ್ದಾರೆ.
‘ಮೂರು, ನಾಲ್ಕು ಅಥವಾ ಐದನೇ ರಂಗಗಳನ್ನು ರಚಿಸುವಂತಹ ನಾಟಕಗಳೆಲ್ಲ ವಿಫಲವಾಗಿವೆ. ಆದ್ದರಿಂದ ಅಸ್ತಿತ್ವದಲ್ಲಿರುವ ಯುಪಿಎ ಮೈತ್ರಿಕೂಟವನ್ನು ಬಲಪಡಿಸುವ ಅಗತ್ಯವಿದೆ‘ ಎಂದು ಹೇಳಿದ್ದಾರೆ.
‘ದೆಹಲಿಯಲ್ಲಿರುವ ಕೆಲವರು ಮತ್ತೊಂದು ಯುಪಿಎ-II ರಚನೆಯ ಸಿದ್ಧತೆಯಲ್ಲಿದ್ದಾರೆ. ಆ ಕಾರಣದಿಂದ ಯುಪಿಎ–I ಅನ್ನು ಬಲಪಡಿಸಬೇಕೆಂದು ಕಳಕಳಿಯಿಂದ ಹೇಳುತ್ತಿದ್ದೇನೆ‘ ಎಂದು ಹೇಳಿದ ರಾವತ್ ಅವರು, ‘ದೆಹಲ್ಲಿಯಲ್ಲಿರುವ ಕೆಲವರು‘ ಯಾರು ಎಂದು ನಿರ್ದಿಷ್ಟವಾಗಿ ಹೇಳಲಿಲ್ಲ.
‘ಒಂದು ಪಕ್ಷ ಯುಪಿಎ–II ರಚನೆಯಾದರೆ ಈಗಿರುವ ಯುಪಿಎಗಿರುವ ಪ್ರಾಮುಖ್ಯತೆ ಕಡಿಮೆಯಾಗುತ್ತದೆ. ಆಗ ವಿರೋಧ ಪಕ್ಷಗಳ ಶಕ್ತಿಯೂ ಕುಂದುತ್ತದೆ‘ ಎಂದು ರಾವತ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.