ನವದೆಹಲಿ: ಪ್ರಜಾಪ್ರಭುತ್ವದ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳುತ್ತಿರುವ ‘ಅಪಾಯಕಾರಿ ಆಡಳಿತ’ದಿಂದ ದೇಶದ ಜನರನ್ನು ರಕ್ಷಿಸಬೇಕಿದೆ ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರು.
ನೂತನವಾಗಿ ರಚನೆಯಾಗಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಸಭೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಪ್ರಥಮ ಬಾರಿ ಭಾನುವಾರ ನಡೆಯಿತು.
ಈ ವೇಳೆ ಮಾತನಾಡಿದ ಸೋನಿಯಾ ಗಾಂಧಿ, ‘ದೇಶದ ಬಡವರು ಮತ್ತು ಸೌಲಭ್ಯ ವಂಚಿತರು ಭಯ, ಹತಾಶೆಯಿಂದ ಬದುಕುವಂಥ ವಾತಾವರಣವಿದೆ. ಈ ಕುರಿತು ಎಚ್ಚರ ವಹಿಸಬೇಕು’ ಎಂದರು.
ಮೈತ್ರಿಗೆ ಬದ್ಧ: ಮೋದಿ ಸರ್ಕಾರದ ಜನಪ್ರಿಯತೆ ಕುಂದತೊಡಗಿದೆ. ಈ ಕುರಿತುಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದಲ್ಲಿ ಹತಾಶೆ ಬಿಂಬಿತವಾಗುತ್ತಿದೆ. ಮೈತ್ರಿ ರಚಿಸುವ ವಿಷಯಕ್ಕೆ ನಾವೆಲ್ಲರೂ ಬದ್ಧರಾಗಿದ್ದು, ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜತೆಗಿರಲಿದ್ದೇವೆ ಎಂದೂ ಸೋನಿಯಾ ಹೇಳಿದರು.
ರಾಹುಲ್ ಗಾಂಧಿ ಮಾತನಾಡಿ, ಪಕ್ಷ ಈಗ ಅನುಭವಿಗಳ ಮತ್ತು ಉತ್ಸಾಹಿಗಳ ತಂಡವಾಗಿದ್ದು, ತುಳಿತಕ್ಕೊಳಗಾದವರ ಪರ ದನಿಯೆತ್ತಬೇಕಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.