ADVERTISEMENT

ಹಿಂದಿಯೇತರ ಭಾಷಿಕರ ಮೇಲೆ ಹಿಂದಿ ಹೇರಿಕೆ ಬೇಡ: ಸೋನು ನಿಗಮ್‌

​ಪ್ರಜಾವಾಣಿ ವಾರ್ತೆ
Published 3 ಮೇ 2022, 19:32 IST
Last Updated 3 ಮೇ 2022, 19:32 IST
ಸೋನು ನಿಗಮ್‌
ಸೋನು ನಿಗಮ್‌   

ನವದೆಹಲಿ: ‘ಹಿಂದಿ ನಮ್ಮ ದೇಶದ ರಾಷ್ಟ್ರೀಯ ಭಾಷೆಯಲ್ಲ. ಅದನ್ನು ಹಿಂದಿಯೇತರ ನಾಗರಿಕರ ಮೇಲೆ ಹೇರಲು ಹೋದರೆ ಒಡಕುಗಳು ಮೂಡುತ್ತವೆ’ ಎಂದುಪ್ರಸಿದ್ಧ ಗಾಯಕ ಸೋನು ನಿಗಮ್‌ ಎಚ್ಚರಿಸಿದ್ದಾರೆ.

‘ದೇಶದ ಸಂವಿಧಾನದಲ್ಲಿ ಎಲ್ಲಿಯೂ ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಉಲ್ಲೇಖಿಸಿದಂತಿಲ್ಲ. ಇದು ದೇಶದಲ್ಲಿ ಹೆಚ್ಚು ಜನರು ಮಾತನಾಡುವ ಭಾಷೆಯೇ ಹೊರತು ರಾಷ್ಟ್ರೀಯ ಭಾಷೆಯಲ್ಲ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

‘ತಮಿಳು ಮತ್ತು ಸಂಸ್ಕೃತದಲ್ಲಿ ಯಾವುದು ಪ್ರಪಂಚದ ಅತ್ಯಂತ ಹಳೆಯ ಭಾಷೆ ಎಂಬ ಚರ್ಚೆ ನಡೆಯುತ್ತಿದೆ. ಜನರು ತಮಿಳು ಅತ್ಯಂತ ಹಳೆಯದು ಎಂದು ಹೇಳುತ್ತಾರೆ’ ಎಂದು ಅವರು ‘ಸಿನಿಮಾಬೀಸ್ಟ್‌’ ವೆಬ್‌ಸೈಟ್‌ಗೆತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.