ADVERTISEMENT

ನಿಕೋಬಾರ್‌ ದ್ವೀಪದಲ್ಲಿ ನೈರುತ್ಯ ಮುಂಗಾರು ಆರಂಭ; ಮೇ 31ರೊಳಗೆ ಕೇರಳಕ್ಕೆ: IMD

ಪಿಟಿಐ
Published 19 ಮೇ 2024, 12:07 IST
Last Updated 19 ಮೇ 2024, 12:07 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಭಾರತದ ಕೃಷಿ ಆಧಾರಿತ ಆರ್ಥಿಕತೆಯ ಜೀವನಾಡಿಯಾಗಿರುವ ನೈರುತ್ಯ ಮುಂಗಾರು ಭಾನುವಾರ ದೇಶದ ದಕ್ಷಿಣ ಭಾಗದ ನಿಕೋಬಾರ್ ದ್ವೀಪಗಳಿಂದ ಆರಂಭವಾಗಿದ್ದು ಮೇ 31ರೊಳಗೆ ಕೇರಳ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

‘ನೈರುತ್ಯ ಮಾನ್ಸೂನ್ ಮಾಲ್ದೀವ್ಸ್‌ನ ಕೆಲವು ಭಾಗಗಳು ಮತ್ತು ಕೊಮೊರಿನ್ ಪ್ರದೇಶ ದಕ್ಷಿಣ ಬಂಗಾಳ ಕೊಲ್ಲಿ ನಿಕೋಬಾರ್ ದ್ವೀಪಗಳು ಮತ್ತು ದಕ್ಷಿಣ ಅಂಡಮಾನ್ ಸಮುದ್ರದ ಕೆಲವು ಭಾಗಗಳಿಗೆ ಭಾನುವಾರ ಆವರಿಸಿತು’ ಎಂದು ಐಎಂಡಿ ಕಚೇರಿ ತಿಳಿಸಿದೆ.

ADVERTISEMENT

ಮಾನ್ಸೂನ್‌ ಮಳೆಯು ಕೇರಳವನ್ನು ಪ್ರವೇಶಿಸುವ ದಿನಾಂಕವು ಕಳೆದ 150 ವರ್ಷಗಳಲ್ಲಿ ವ್ಯಾಪಕ ಬದಲಾವಣೆ ಕಂಡಿದೆ. 1918ರಲ್ಲಿ ಮೇ 11 ರಂದು ನೈರುತ್ಯ ಮುಂಗಾರು ಕೇರಳ ತುಂಬಾ ಮುಂಚಿತವಾಗಿ ಪ್ರವೇಶಿಸಿತ್ತು. 1972ರಲ್ಲಿ ಜೂನ್ 18 ರಂದು ಅತ್ಯಂತ ವಿಳಂಬವಾಗಿ ಪ್ರವೇಶಿಸಿತ್ತು. 

ಕಳೆದ ವರ್ಷ ಜೂನ್ 8ರಂದು 2022ರಲ್ಲಿ ಮೇ 29 2021ರಲ್ಲಿ ಜೂನ್ 3 ಮತ್ತು 2020ರಲ್ಲಿ ಜೂನ್ 1 ರಂದು ದಕ್ಷಿಣ ರಾಜ್ಯವನ್ನು ಪ್ರವೇಶಿಸಿತ್ತು ಎಂದು ಐಎಂಡಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.