ಲಖನೌ: ಸಮಾಜವಾದಿ ಪಕ್ಷದ (ಎಸ್‌ಪಿ) ಪಕ್ಷದ ಪ್ರಧಾನ ಕಾರ್ಯದರ್ಶಿ ಆಜಂ ಖಾನ್ ಅವರಿಗೆ 2019ರಲ್ಲಿ ದಾಖಲಾದ ಹಲ್ಲೆ ಪ್ರಕರಣದಲ್ಲಿ ಉತ್ತರ ಪ್ರದೇಶದ ರಾಂಪುರ ಪಟ್ಟಣದ ನ್ಯಾಯಾಲಯ ಸೋಮವಾರ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಇತರ ಮೂವರು ಆರೋಪಿಗಳಾದ ರಾಂಪುರ ಪುರಸಭೆ ಅಧ್ಯಕ್ಷ ಅಝರ್ ಅಹ್ಮದ್ ಖಾನ್, ರಾಂಪುರದ ಮಾಜಿ ಅಧಿಕಾರಿ (ಸಿಒ) ಅಲಿ ಹಸನ್ ಮತ್ತು ಗುತ್ತಿಗೆದಾರ ಬರ್ಕತ್ ಅಲಿ ಅವರಿಗೂ ಈ ಪ್ರಕರಣದಲ್ಲಿ ತಲಾ ಐದು ವರ್ಷಗಳ ಶಿಕ್ಷೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಧಿಸಿದೆ.
ಪ್ರಾಸಿಕ್ಯೂಷನ್ ಪ್ರಕಾರ, ಆಜಂ ಖಾನ್ ಸೂಚನೆ ಮೇರೆಗೆ ಅಲಿ ಹಸನ್ ಮತ್ತು ಇತರರು ರಾಂಪುರ ಪಟ್ಟಣದ ಡುಂಗರ್‌ಪುರ ಬಸ್ತಿ ನಿವಾಸಿ ಎಹ್ತೆಶಾಮ್ ಎಂಬುವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದರು. ಈ ಪ್ರಕರಣದಲ್ಲಿ ಆಜಂ ಖಾನ್ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪ ಹೊರಿಸಲಾಗಿತ್ತು.
ಕೆಲವು ತಿಂಗಳ ಹಿಂದಷ್ಟೇ ಖಾನ್, ತನ್ನ ಮಗ ಅಬ್ದುಲ್ಲಾ ಆಜಂನ ನಕಲಿ ಜನನ ಪ್ರಮಾಣಪತ್ರದ ಪ್ರಕರಣದಲ್ಲಿ ಏಳು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಅವರ ಪತ್ನಿ ತಂಜೀನ್ ಫಾತಿಮಾ ಮತ್ತು ಮಗ ಅಬ್ದುಲ್ಲಾ ಆಜಂ ಕೂಡ ಏಳು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.